ಕೋಡಿ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳಿಂದ ಕ್ಷೇತ್ರ ಭೇಟಿ
ಕುಂದಾಪುರ, ಜ.9: ಹೊಸ ವರ್ಷದ ಪ್ರಯುಕ್ತ ಹೊಸ ಕಲಿಕೆಗೆ ಮುನ್ನುಡಿಯಾಗಿ ಕೋಡಿ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಶಾಲೆ ಸಿಬಿಎಸ್‌ಸಿ ವಿದ್ಯಾರ್ಥಿಗಳು ಉಡುಪಿ ಹಾಗೂ ಕುಂದಾಪುರದ ವಿವಿಧ ಸಾರ್ವಜನಿಕ ಹಾಗೂ ಸರಕಾರಿ ಕಚೇರಿಗಳಿಗೆ ಭೇಟಿ ನೀಡಿದರು.
ಜಿಲ್ಲಾಧಿಕಾರಿ ಕಚೇರಿ, ಅಗ್ನಿಶಾಮಕ ಠಾಣೆ, ವಿಶೇಷ ಚೇತನ ಶಾಲೆ, ಕಸ ವಿಲೇವಾರಿ ಸ್ಥಳ, ಕರಾವಳಿ ಕಾವಲು ಪೊಲೀಸ್ ಠಾಣೆ ಗಂಗೊಳ್ಳಿ, ಗಂಗೊಳ್ಳಿ ಮೀನುಗಾರಿಕಾ ಬಂದರು, ಪುರಸಭೆ, ಪೊಲೀಸ್ ಠಾಣೆ, ಕುಂದಾಪುರ ಸಂಚಾರ ಪೊಲೀಸ್ ಠಾಣೆ, ಸರಕಾರಿ ಆಸ್ಪತ್ರೆ, ಅಂಚೆ ಕಚೇರಿ, ಕುಂದಾಪುರ ತಾಲೂಕು ಕಚೇರಿ, ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಕಚೇರಿ, ಸಾರ್ವಜನಿಕ ಗ್ರಂಥಾಲಯ, ವಿದ್ಯುತ್ ಸರಬರಾಜು ಕೇಂದ್ರ, ಉಪ ಪೊಲೀಸ್ ವರಿಷ್ಠಾಧಿಕಾರಿ ಗಳ ಕಚೇರಿ, ಜೀವ ವಿಮಾ ನಿಗಮ ಕಚೇರಿ, ವೃದ್ಧಾಶ್ರಮ ಹಾಗೂ ಕುಂದಾಪುರದ ಆಟೋ ನಿಲ್ದಾಣಕ್ಕೆ ಭೇಟಿ ನೀಡುವುದರ ಮೂಲಕ ವಿದ್ಯಾರ್ಥಿಗಳು ಎಲ್ಲರ ಗಮನ ಸೆಳೆದಿದ್ದಾರೆ.
ಕ್ಷೇತ್ರ ಭೇಟಿ ನೀಡಿದ ಎಲ್ಲಾ ಸ್ಥಳಗಳಲ್ಲಿ ಅಧಿಕಾರಿ ವರ್ಗದವರು ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಆತ್ಮೀಯ ವಾಗಿ ಸ್ವಾಗತಿಸಿ, ಸಿಹಿ ತಿಂಡಿ ನೀಡುವುದರ ಮೂಲಕ ಹೊಸ ವರ್ಷದ ಶುಭಾಶಯಗಳನ್ನು ಕೋರಿದರು. ಅಧಿಕಾರಿಗಳು ತಮ್ಮ ಕಚೇರಿಗಳ ಕಾರ್ಯವೈಖರಿಯ ಕುರಿತು ಅಗತ್ಯ ಮಾಹಿತಿಯನ್ನು ವಿವರವಾಗಿ ನೀಡಿದರು.
ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಸಾರ್ವಜನಿಕ ಕ್ಷೇತ್ರಗಳಲ್ಲಿ ಎದುರಾಗುವ ಗೊಂದಲಗಳಿಗೆ ಸ್ಪಷ್ಟ ಪರಿಹಾರ ಗಳನ್ನು ತಿಳಿಸಿಕೊಟ್ಟ ಅಧಿಕಾರಿ ಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಭೇಟಿ ವಿದ್ಯಾರ್ಥಿಗಳಿಗೆ ತಿಳುವಳಿಕೆ ಹಾಗೂ ಅನುಭವವನ್ನು ಹೆಚ್ಚಿಸಿದ ಮಹತ್ವದ ಅವಕಾಶವಾಗಿ ಪರಿಣಮಿಸಿತು.
ಒಟ್ಟಾರೆಯಾಗಿ ವಿವಿಧ ಕ್ಷೇತ್ರ ಭೇಟಿಯು ವಿದ್ಯಾರ್ಥಿಗಳ ಸರ್ವ ತೋಮುಖ ಬೆಳವಣಿಗೆಗೆ ಸಹಕಾರಿಯಾಗುವುದಲ್ಲದೆ ವಿದ್ಯಾರ್ಥಿ ಜೀವನದಲ್ಲಿ ಒಂದು ಮರೆಯಲಾಗದ ಅನುಭವವನ್ನು ನೀಡಿತು.