×
Ad

ಉಡುಪಿ ಜಿಲ್ಲೆಯ ಶಿಕ್ಷಕರಿಗಾಗಿ ಪ್ರಬಂಧ ಸ್ಪರ್ಧೆ

Update: 2023-10-25 19:30 IST

ಉಡುಪಿ, ಅ.25: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಘಟಕವು ಸಮಾನತೆಯ ಸಮಾಜದ ಶಿಲ್ಪಿ ಪ್ರವಾದಿ ಮುಹಮ್ಮದ್ (ಸ) ಎಂಬ ಶೀರ್ಷಿಕೆ ಯಡಿಯಲ್ಲಿ ಪ್ರವಾದಿ ಪರಿಚಯ ಅಭಿಯಾನವನ್ನು ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಉಡುಪಿ ಜಿಲ್ಲೆಯ ಶಿಕ್ಷಕರಿಗಾಗಿ ಪ್ರಬಂಧ ಸ್ಪರ್ಧೆ ಯೊಂದನ್ನು ಆಯೋಜಿಸಿದೆ.

ಪ್ರಬಂಧ ಸ್ಪರ್ಧೆಯ ಶೀರ್ಷಿಕೆ ‘ಸಮಾನತೆಯ ಸಮಾಜದ ಶಿಲ್ಪಿ - ಪ್ರವಾದಿ ಮುಹಮ್ಮದ್(ಸ)’. ಸ್ಪರ್ಧೆಯಲ್ಲಿ ವಿಜೇತರಾದ ವರಿಗೆ ಪ್ರಥಮ ಬಹುಮಾನ 20,000ರೂ., ದ್ವಿತೀಯ 15,000 ರೂ., ತೃತೀಯ 10,000ರೂ. ನೀಡಲಾಗುವುದು. ಅಲ್ಲದೇ ತಲಾ 2,000ರೂ.ನಂತೆ 10 ಪ್ರಬಂಧಗಳಿಗೆ ಸಮಾಧಾನಕರ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ ನೀಡಲಾಗುವುದು. ಭಾಗವಹಿಸಿದವರೆಲ್ಲರಿಗೂ ಪ್ರಮಾಣಪತ್ರವಿರುತ್ತದೆ.

ಶಾಲಾ-ಕಾಲೇಜುಗಳಿಗೆ ಮಧ್ಯಾವಧಿ ರಜಾದಿನಗಳಾಗಿರುವುದರಿಂದ ಪ್ರಬಂಧ ಕಳುಹಿಸಲು ಇರುವ ಕೊನೆಯ ದಿನಾಂಕವನ್ನು ನವೆಂಬರ್ 15ರವರೆಗೆ ವಿಸ್ತರಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9901422952 / 9743580081ನ್ನು ಸಂಪರ್ಕಿಸಬಹುದು ಎಂದು ಆಯೋಜಕರ ಪತ್ರಿಕಾ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News