ಹೋಮ್ ನರ್ಸ್‌ನಿಂದ ಲಕ್ಷಾಂತರ ರೂ. ವಂಚನೆ ಆರೋಪ: ಪ್ರಕರಣ ದಾಖಲು

Update: 2026-08-02 20:58 IST

ಬ್ರಹ್ಮಾವರ, ಆ.2: ಹೋಮ್ ನರ್ಸ್‌ನೊಬ್ಬ ಮನೆಯ ಯಜಮಾನರ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿ ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೈಬರಕಟ್ಟೆಯ ಭಾಗ್ಯಲಕ್ಷ್ಮೀ ಎಂಬವರ ಗಂಡ ಶ್ರೀನಿವಾಸ ಪೂಜಾರಿ ಎಂಬವರಿಗೆ ತೀವ್ರ ಅನಾರೋಗ್ಯದ ಕಾರಣ ಅವರ ಯೋಗಕ್ಷಮ ನೋಡಿ ಕೊಳ್ಳಲು ಉಡುಪಿಯ ವಿ ಕೇರ್ ಹೋಮ್ ನರ್ಸ್ ಸಂಸ್ಥೆಯವರೊಂದಿಗೆ ಮಾತುಕತೆ ನಡೆಸಿ ಮುಂಗಡವಾಗಿ 28,000ರೂ. ಹಣವನ್ನು ಪಾವತಿಸಿದ್ದರು.

ಜೂ.25ರಂದು ವಿ ಕೇರ್ ಹೋಮ್ ನರ್ಸ್ ಸಂಸ್ಥೆಯಿಂದ ಹೋಮ್ ಬ್ರದರ್ ಸಚಿನ್ ಎಂಬಾತ ಭಾಗ್ಯಲಕ್ಷ್ಮೀ ಅವರ ಮನೆಗೆ ಬಂದಿದ್ದನು. ಬಳಿಕ ಸಚಿನ್ ಜು.7ರಂದು ಅಗತ್ಯ ಕೆಲಸ ಇರುವುದಾಗಿ ಹೇಳಿ ತನ್ನ ಊರಿಗೆ ಹೋಗಿದ್ದನು. ಜು.28ರಂದು ಭಾಗ್ಯಲಕ್ಷ್ಮೀ ಅವರ ಮಗಳು ತನ್ನ ತಂದೆ ಶ್ರೀನಿವಾಸ ಪೂಜಾರಿ ಅವರ ಬ್ಯಾಂಕ್ ಖಾತೆ ಪರಿಶೀಲಿಸಿದರು.

ಆಗ ಯೋಗಕ್ಷಮ ನೋಡಿಕೊಳ್ಳುತ್ತಿದ್ದ ಸಚಿನ್ ಎಂಬಾತ ಶ್ರೀನಿವಾಸ ಪೂಜಾರಿ ಅವರ ಗಮನಕ್ಕೆ ಬಾರದೇ ಅವರ ಬ್ಯಾಂಕ್ ಖಾತೆಯಿಂದ ಅವರ ಮೊಬೈಲ್‌ನಲ್ಲಿ ಯುಪಿಐ ಮೂಲಕ ಹಂತ ಹಂತವಾಗಿ 1,60,500ರೂ. ಹಣವನ್ನು ವರ್ಗಾವಣೆ ಮಾಡಿಕೊಂಡಿರುವುದು ಕಂಡು ಬಂದಿದೆ. ಈ ಮೂಲಕ ಸಚಿನ್ ನಂಬಿಕೆ ದ್ರೋಹ ಎಸಗಿ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News