ಕಾರ್ಕಳ : ಕನ್ನಡ ಸಾಹಿತ್ಯ ಪರಿಷತ್ತು, ಜೈನಧರ್ಮ ಜೀರ್ಣೋದ್ಧಾರ ಸಂಘದ ವತಿಯಿಂದ ಕವಿಗೋಷ್ಠಿ
ಕಾರ್ಕಳ : ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕ ಹಾಗೂ ಜೈನಧರ್ಮ ಜೀರ್ಣೋದ್ಧಾರ ಸಂಘ ಕಾರ್ಕಳ ಇವರ ಸಹಯೋಗದಲ್ಲಿ ತ್ಯಾಗ ಮೂರ್ತಿ ಗೊಮ್ಮಟೇಶನಿಗೆ ಕಾವ್ಯಾಭೀಷೇಕ ಕವಿಗೋಷ್ಠಿ ನಡೆಯಿತು.
ಕವಿಗೋಷ್ಠಿಯ ಸಮನ್ವಯಕಾರರಾಗಿ ಮಾತಾನಾಡಿದ ಹಿರಿಯ ಸಾಹಿತಿ ಜ್ಯೋತಿ ಗುರುಪ್ರಸಾದ್ ಅವರು ಸರ್ವ ಜನಾಂಗದ ಶಾಂತಿಯ ತೋಟದ ನಾಡಿನಲ್ಲಿ ಕಾರ್ಕಳ ಜೈನರುದ್ಯಾನದ ಚೆಲುವಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಅವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತಾನಾಡಿದರು.
ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಅಸೋಸಿಯೇಶನ್ ನ ರಾಜ್ಯಾದ್ಯಕ್ಷರಾದ ಡಾ ರವೀಂದ್ರ ಶೆಟ್ಟಿಯವರು ಉದ್ಘಾಟಿಸಿದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರು ಆಶಯ ನುಡಿಗಳನ್ನಾಡಿ ತಾವು ರಚಿಸಿದ ಕವನ ವಾಚಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜೈನ ಧರ್ಮ ಜೀರ್ಣೋದ್ಧಾರ ಸಂಘ ಕಾರ್ಕಳ ಇದರ ಗೌರವ ಕಾರ್ಯದರ್ಶಿ ಮೋಹನ್ ಪಡಿವಾಳ್, ರಂಗ ಸಂಸ್ಕೃತಿ ಕಾರ್ಕಳ ಅಧ್ಯಕ್ಷ ನಿತ್ಯಾನಂದ ಪೈ, ತಾಲೂಕು ಸಮ್ಮೇಳನ ಸರ್ವಾಧ್ಯಕ್ಷ ಸಿದ್ಧಾಪುರ ವಾಸುದೇವ ಭಟ್ಟ, ಬೆಟ್ಟದ ಅರ್ಚಕ ನಾಗರಾಜ ಇಂದ್ರ ಅವರು ಶುಭ ಹಾರೈಸಿದರು. ಘಟಕದ ಕೋಶಾಧಿಕಾರಿ ಅರುಣ್ ರಾವ್ ಗೌರವ ಕಾರ್ಯದರ್ಶಿ ಸುಧಾಕರ ಪೊಸ್ರಾಲ್ ಕಾರ್ಯದರ್ಶಿ ದೇವದಾಸ ಕೆರೆಮನೆ ಉಪಸ್ಥಿತರಿದ್ದರು.
ಕವಿಗೋಷ್ಠಿಯಲ್ಲಿ ಸಿದ್ಧಾಪುರ ವಾಸುದೇವ ಭಟ್ಟ, ಗಂಗಾಧರ ಪಣಿಯೂರು, ರಮೇಶ್ ಪ್ರಭು , ಬಿ ವಿ ರಾವ್ ಮಾಲತಿ ವಸಂತರಾಜ್, ಅನುಪಮ ಚಿಂಪ್ಣೂಕರ್, ಸುಲೋಚನಾ ಬಿ ವಿ , ಶೈಲಜಾ ಹೆಗ್ಡೆ, ಡಾ ಸುಮತಿ ಪ್ರಜ್ವಲಾ ಶೆಣೈ, ಹರಿಪ್ರಸಾದ್ ನಂದಳಿಕೆ, ಅವನೀ ಉಪಾಧ್ಯ , ದೇವದಾಸ ಕೆರೆಮನೆ ಮತ್ತು ಗಣೇಶ್ ಜಾಲ್ಸೂರು ಕವನದ ಮೂಲಕ ಕಾವ್ಯಾಭೀಷಕ ಮಾಡಿದರು. ಭೋಜರಾಜ ಕಡಂಬ ಹಾಗೂ ನಾಗರಾಜ ಇಂದ್ರ ಜಿನಸ್ತುತಿಗೈದರು. ಪ್ರಾಂಜಲಿ ಜಿನಸ್ತುತಿ ಗಾಯನ ಮಾಡಿದರು. ಶಶಿಕಲಾ ಹೆಗ್ಡೆ ಪ್ರಾರ್ಥಿಸಿ, ಪ್ರಭಾಕರ ಶೆಟ್ಟಿ ಕೊಂಡಳ್ಳಿ ಸ್ವಾಗತಿಸಿ ,ಗಣೇಶ್ ಜಾಲ್ಸೂರು ನಿರೂಪಿಸಿದರು. ಸುಧಾಕರ ಪೊಸ್ರಾಲು ಧನ್ಯವಾದವಿತ್ತರು. ಶಿವಸುಬ್ರಹ್ಮಣ್ಯ ಭಟ್ , ಜಿಲ್ಲಾ ಪ್ರತಿನಿಧಿ ನರಸಿಂಹ ಮೂರ್ತಿ,ತಿಪ್ಪೇಸ್ವಾಮಿ , ಸಮರ್ಥ್ ಸಹಕರಿಸಿದರು.