‘ಲೊಂಬಾರ್ಡ್ ಆಸ್ಪತ್ರೆ ಉಡುಪಿ ಮ್ಯಾರಥಾನ್’: 3,000ಕ್ಕೂ ಅಧಿಕ ಸ್ಪರ್ಧಿಗಳು ಭಾಗಿ
ಉಡುಪಿ, ಡಿ.7: ದೈಹಿಕ ಸಾಮರ್ಥ್ಯವನ್ನು ಉತ್ತೇಜಿಸುವ ಉದ್ದೇಶದಿಂದ ರನ್ನರ್ಸ್ ಕ್ಲಬ್ ವತಿಯಿಂದ ಎರಡನೇ ಆವೃತ್ತಿಯ ಲೊಂಬಾರ್ಡ್ ಆಸ್ಪತ್ರೆ ಉಡುಪಿ ಮ್ಯಾರಥಾನ್ 2025ನ್ನು ಉಡುಪಿಯಲ್ಲಿ ರವಿವಾರ ಹಮ್ಮಿಕೊಳ್ಳಲಾಗಿತ್ತು.
ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಮ್ಯಾರಥಾನ್ ಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಅದಾನಿ ಗ್ರೂಪ್ ದಕ್ಷಿಣ ಭಾರತ ಅಧ್ಯಕ್ಷ ಕಿಶೋರ್ ಆಳ್ವ, ಮಿಷನ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಚಾಲನೆ ನೀಡಿದರು.
ಜಿಲ್ಲಾ ಕ್ರೀಡಾಂಗಣದಿಂದ ಆರಂಭಗೊಂಡ ಓಟ ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ಅದೇ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು. ವಿವಿಧ ವಯೋಮಾನದ ಪುರುಷ, ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗಾಗಿ 21 ಕಿ.ಮಿ., 10ಕಿ.ಮಿ., 5 ಕಿ.ಮಿ., 3ಕಿ.ಮಿ. ಸಾರಿ ರನ್ ಹಾಗೂ ಫನ್ ರನ್ ಗಳಲ್ಲಿ 3,000ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಮಾತನಾಡಿ, ಇಂದಿನ ಜೀವನ ಶೈಲಿಯಿಂದಾಗಿ ಯಾರಿಗೂ ವ್ಯಾಯಾಮ ಇಲ್ಲದಂತೆ ಆಗಿದೆ. ಆ ನಿಟ್ಟಿನಲ್ಲಿ ಇಂತಹ ಮ್ಯಾರಾಥಾನ್ ಆಯೋಜಿಸುವುದು ಅತೀ ಅಗತ್ಯವಾಗಿದೆ. ಫಿಟ್ನೆಸ್ ಎಂಬುದು ನಮ್ಮ ಬದುಕಿನ ಭಾಗ. ಆಗ ಮಾತ್ರ ನಾವು ಆರೋಗ್ಯವಂತರಾಗಿರಲು ಸಾಧ್ಯ ಎಂದರು.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಜೀವನ ಶೈಲಿಯ ಬದಲಾವಣೆಯಿಂದ ನಾವು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ಇದನ್ನು ಬದಲಾಯಿಸಿಕೊಳ್ಳುವುದು ಅತೀ ಅಗತ್ಯ. ಮಂದಿರ ಮಸೀದಿಗಳಿಗೆ ಹೋದರೆ ಮನಸ್ಸು ಶಾಂತಿಯಾದರೆ, ಕ್ರೀಡಾಂಗಣಕ್ಕೆ ಬಂದು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೇ ದೇಹಕ್ಕೆ ಶಾಂತಿ ಸಿಗುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಶಾಸಕ ಯಶ್ಪಾಲ್ ಸುವರ್ಣ, ಉಡುಪಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಐಎಂಎ ಉಡುಪಿ ಕರಾವಳಿ ಅಧ್ಯಕ್ಷ ಡಾ.ಅಶೋಕ್ ಕುಮಾರ್, ರನ್ನರ್ ಕ್ಲಬ್ ಅಧ್ಯಕ್ಷ ಡಾ.ತಿಲಕ್ ಚಂದ್ರಪಾಲ್, ಕಾರ್ಯದರ್ಶಿ ದಿವಾಕರ್, ಕ್ಲಬ್ನ ಜೊತೆ ಕಾರ್ಯದರ್ಶಿ ದಿವ್ಯೇಶ್ ಶೆಟ್ಟಿ ಉಪಸ್ಥಿತರಿದ್ದರು.
21 ಕಿ.ಮೀ. ಮ್ಯಾರಥಾನ್ ವಿಜೇತರು
21ಕೆ 18-35ವಯೋಮಿತಿ ಪುರುಷ ವಿಭಾಗ: ಪ್ರ-ಕಿರಣ್ ಕೆ., ದ್ವಿ- ಸುಜಿತ್ ಟಿ.ಆರ್., ತೃ- ವಿಶಾಲ್ ಕೆ.
ಮಹಿಳಾ ವಿಭಾಗ: ಪ್ರ- ನಂದಿನಿ ಜಿ., ದ್ವಿ-ಸಾಕ್ಷಿ ಕುಲಾಲ್, ತೃ- ಪ್ರತೀಕ್ಷಾ.
36-45ವಯೋಮಿತಿ ಪುರುಷ ವಿಭಾಗ: ಪ್ರ-ಸಿಮೋನ್ ಕೆ.ಟಿ., ದ್ವಿ- ನಂದೇಶ್ ಗಾಂವ್ಕರ್, ತೃ- ಪ್ರಶಾಂತ್ ಎಚ್.ಎಸ್.
ಮಹಿಳಾ ವಿಭಾಗಢ ಪ್ರ- ಆಶಾ ಪಿ., ದ್ವಿ- ಮೆಹ್ವಿಶ್ ಹುಸೇನ್, ತೃ-ಜುಲೀ.
46-45ವಯೋಮಿತಿ ಪುರುಷ ವಿಭಾಗ: ಪ್ರ- ಜೋಸೆಫ್ ಇಲಿಕಲ್, ದ್ವಿ- ಸುನೀಲ್ ಮೆನನ್, ತೃ- ಶಿವಾನಂದ ಶೆಟ್ಟಿ.
ಮಹಿಳಾ ವಿಭಾಗ: ಪ್ರ- ಜಸೀನಾ, ದ್ವಿ- ಡಾ.ಪ್ರಮೀಳಾ ಎಂ.ಡಿ.
56ವರ್ಷ ಮೇಲ್ಪಟ್ಟ ಪುರುಷ ವಿಭಾಗ: ಪ್ರ- ಬಾಲಕೃಷ್ಣ ಟಿ., ದ್ವಿ- ವಿನಯ್ ಪ್ರಭು, ತೃ-ಅಂಬಿಗಬತಿ.
ಮಹಿಳಾ ವಿಭಾಗ- ಪ್ರ- ಪೂರ್ಣಿಮಾ ಕೆ., ದ್ವಿ- ಡಾ.ಸಂಧ್ಯಾ, ತೃ- ವಿದ್ಯಾ ಪ್ರತಾಪ್.
ವಿದ್ಯಾರ್ಥಿಗಳ 5 ಕಿ.ಮೀ. ಹಾಗೂ 3ಕಿ.ಮೀ. ಓಟದಲ್ಲಿ ಸಮಗ್ರ ಪ್ರಶಸ್ತಿಯನ್ನು ನಿಟ್ಟೆ ಸ್ಕೂಲ್ ಪಡೆದುಕೊಂಡಿತು. ದ್ವಿತೀಯ ಬಹುಮಾನವನ್ನು ಪಾಜಕ ಆನಂದ ತೀರ್ಥ ಶಾಲೆ ತನ್ನದಾಗಿಸಿಕೊಂಡಿತು.