ಹಾವಂಜೆಯಲ್ಲಿ ಮೌಸ್‌ಡೀರ್ ಪತ್ತೆ
Update: 2025-12-20 20:54 IST
ಉಡುಪಿ, ಡಿ.20: ಕಾಡುಗಳಲ್ಲಿ ಕಂಡುಬರುವ ಸಣ್ಣ ಜಿಂಕೆ ಜಾತಿಯ ಪ್ರಾಣಿ ಅಪರೂಪದ ಮೌಸ್ ಡೀರ್ (ಬರ್ಕ) ಹಾವಂಜೆ ಗ್ರಾಮದ ಪರಾರಿ ಎಂಬಲ್ಲಿ ಪತ್ತೆಯಾಗಿದೆ.
ಹಾವಂಜೆ ಗ್ರಾಮದ ಕೀಳಂಜೆಯ ರಿಂಗ್ ರೋಡ್ ಪರಾರಿ ಎಂಬಲ್ಲಿ ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳೇಬೆಟ್ಟು ಅವರ ದ್ವಿಚಕ್ರ ವಾಹನಕ್ಕೆ ಈ ಮೌಸ್ ಡೀರ್ ಅಡ್ಡವಾಗಿ ಬಂದಿದೆ. ತಕ್ಷಣ ಅರಣ್ಯ ಪಾಲಕ ದೇವರಾಜ್ ಪಾಣ ಅವರಿಗೆ ಈ ಮಾಹಿತಿ ನೀಡಿದರು. ಬಳಿಕ ಅದು ಸುರಕ್ಷಿತವಾಗಿ ಕಾಡಿನತ್ತ ಪ್ರಯಾಣ ಬೆಳೆಸಿದೆ.