ಕೋಡಿಬೆಂಗ್ರೆ ಮಸೀದಿಯಲ್ಲಿ ರಮಝಾನ್ ಸ್ವಾಗತ ಕಾರ್ಯಕ್ರಮ
Update: 2025-02-27 10:34 IST
ಉಡುಪಿ: ಕೋಡಿಬೆಂಗ್ರೆ ಗ್ರಾಮದ ಜಾಮಿಯಾ ಮಸೀದಿಯಲ್ಲಿ ರಮಝಾನ್ ಸ್ವಾಗತ ಮತ್ತು ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮೌಲಾನ ಝಮೀರ್ ಅಹ್ಮದ್ ರಶಾದಿ ರಮಝಾನ್ ಮಹತ್ವದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸ್ಪರ್ಧೆಗಳಲ್ಲಿ ವಿಜೇತರಾದ ದಾರುನ್ನಜಾತ್ ಮದ್ರಸ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ದಶಕಗಳ ಕಾಲ ಮದ್ರಸದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಉಸ್ತಾದ್ ಆದಮ್ ಸಾಹೇಬ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೋಡಿಬೆಂಗ್ರೆ ಜಾಮಿಯಾ ಮಸೀದಿಯ ಅಧ್ಯಕ್ಷ ಕೆ.ಅಬೂಬಕರ್, ಅಬ್ದುಲ್ ಖಾದರ್ ಸಾಹೇಬ್, ಬಿ.ಕೆ.ಖಾದರ್ ಮಿರಾನ್ ಸಾಹೇಬ್, ಬಿ.ಕೆ.ಜಮಾಲ್, ಮಸೀದಿಯ ಖತೀಬ್ ಮೌಲಾನ ಸಮೀರ್ ಉಪಸ್ಥಿತರಿದ್ದರು.