×
Ad

ಬಾವಿಗೆ ಹಾರಿ ವೃದ್ಧ ಆತ್ಮಹತ್ಯೆ

Update: 2023-08-31 22:15 IST

ಮಲ್ಪೆ, ಆ.31: ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಮನೆಯಲ್ಲೇ ಇದ್ದ ಅಂಬಲಪಾಡಿ ಕಿದಿಯೂರು ಕಪ್ಪೆಟ್ಟುಪಾದೆ ನಿವಾಸಿ ಗಣಪತಿ ಶೆಟ್ಟಿಗಾರ್ (74) ಎಂಬವರು ಕಳೆದ ರಾತ್ರಿ ಮನೋಹರ ಶೆಟ್ಟಿಗಾರ ಎಂಬವರ ಮೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬುಧವಾರ ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದ್ದ ಗಣಪತಿ ಶೆಟ್ಟಿಗಾರ್ ಅವರು ಬೆಳಗ್ಗೆ ಎದ್ದು ನೋಡುವಾಗ ಅಲ್ಲಿ ಕಾಣಿಸದಿದ್ದಾಗ ಮನೆಯವರು ಪರಿಸರದಲ್ಲಿ ಹುಡುಕಾಡಿದ್ದರು. ಅವರು ಬಳಸುತಿದ್ದ ವಾಕಿಂಗ್ ಸ್ಟಿಕ್ ಮನೋಹರ ಶೆಟ್ಟಿಗಾರ್ ಮನೆಯ ಬಾವಿಯ ಬಳಿ ಕಂಡುಬಂದಿದ್ದು, ಬಾವಿಯಲ್ಲಿ ಹುಡುಕಿದಾಗ ಅಲ್ಲಿ ಮೃತದೇಹ ಪತ್ತೆಯಾಯಿತು. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News