ಮಣಿಪಾಲ | ಮಟ್ಕಾ ನಡೆಸುತ್ತಿದ್ದ ಆರೋಪ : ಓರ್ವ ಆರೋಪಿ ವಶಕ್ಕೆ
Update: 2025-12-06 22:10 IST
ಸಾಂದರ್ಭಿಕ ಚಿತ್ರ
ಮಣಿಪಾಲ, ಡಿ.6: ಹೆರ್ಗಾ ಗ್ರಾಮದ ಮಾರ್ಕೇಟ್ ರಸ್ತೆಯ ಬಳಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಸ್ಥಳೀಯ ನಿವಾಸಿ ಧನಂಜಯ ಶೆಟ್ಟಿ(68) ಎಂಬಾತನನ್ನು ಮಣಿಪಾಲ ಪೊಲೀಸರು ಡಿ.5ರಂದು ಸಂಜೆ ವೇಳೆ ವಶಕ್ಕೆ ಪಡೆದು, 2,270ರೂ. ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.