ಶಿರ್ವ | ಮನೆಗೆ ನುಗ್ಗಿ ಸೊತ್ತು ಕಳವು : ಪ್ರಕರಣ ದಾಖಲು
Update: 2025-12-06 22:05 IST
ಶಿರ್ವ, ಡಿ.6: ಮನೆಗೆ ನುಗ್ಗಿದ ಕಳ್ಳರು ಅಪಾರ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಶಿರ್ವ ಗ್ರಾಮದಲ್ಲಿ ಡಿ.2ರಿಂದ ಡಿ.4ರ ಮಧ್ಯಾವಧಿಯಲ್ಲಿ ನಡೆದಿದೆ.
ಮನೆಯ ಬೀಗ ಒಡೆದು ಒಳನುಗ್ಗಿದ ಕಳ್ಳರು, ಕಾಪಾಟಿನಲ್ಲಿದ್ದ ಒಂದು ಚಿನ್ನದ ಬಳೆ, ಉಂಗುರ, ಬೆಳ್ಳಿಯ ಚೈನ್ ಹಾಗೂ ಒಂದು ಜೊತೆ ಬೆಳ್ಳಿ ಕಿವಿಯ ಓಲೆಗಳನ್ನು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 27,500ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.