×
Ad

ಶಿವಪುರ ಬಿಲ್ಲುಬೈಲು ಬಳಿ ರಸ್ತೆ ಕುಸಿತ: ತಡೆಗೋಡೆ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗೆ ಮನವಿ

Update: 2024-09-08 18:15 IST

ಹೆಬ್ರಿ: ಹೆಬ್ರಿಯ ಶಿವಪುರ ಬಿಲ್ಲುಬೈಲು ಬಳಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಸಲು ಮಣ್ಣನ್ನು ತೆಗೆಯಲಾಗಿದ್ದು ಕಂದಕ ನಿರ್ಮಾಣವಾಗಿ ಭಾರೀ ಎತ್ತರದಲ್ಲಿರುವ 4 ಮನೆಗಳು ಕುಸಿಯುವ ಭೀತಿಯಲ್ಲಿವೆ. ಇಲ್ಲಿ ಕೂಡಲೇ ತಡೆಗೋಡೆಗಳನ್ನು ನಿರ್ಮಿ ಸುವಂತೆ ಒತ್ತಾಯಿಸಿ ಗ್ರಾಮಸ್ಥರು ಶನಿವಾರ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು.

ಮನೆಗಳಿಗೆ ಹೋಗುವ ರಸ್ತೆಯು ಕುಸಿಯುತ್ತಿದ್ದು ಮನೆಗಳಿಗೂ ಅಪಾಯ ಎದುರಾಗಿದೆ. ಆದ್ದರಿಂದ ಕೂಡಲೇ ತಡೆಗೋಡೆ ಯನ್ನು ನಿರ್ಮಿಸುವಂತೆ ಸಮಾಜಸೇವಕ ಬೈಕಾಡಿ ಮಂಜುನಾಥ ರಾವ್ ಶಿವಪುರ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ, ರಾಷ್ಟ್ರೀಯ ಹೆದ್ದಾರಿಯ ಯೋಜನಾ ನಿರ್ದೇಶಕರಿಗೆ ಸೂಕ್ತಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಬಿಲ್ಲುಬೈಲು ನಾತು ಪಾಣ ಮತ್ತು ಮನೆಯವರು ಈ ಸಂದರ್ಭದಲ್ಲಿ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News