×
Ad

ಜೈನ ಮುನಿ ಹತ್ಯೆಗೆ ರೋಹಿತ್ ಕುಮಾರ್ ಕಟೀಲ್ ಖಂಡನೆ

Update: 2023-07-09 13:24 IST

ರೋಹಿತ್ ಕುಮಾರ್ ಕಟೀಲ್ 

ಕಾರ್ಕಳ, ಜು.9: ಚಿಕ್ಕೋಡಿ ಹಿರೇಕೋಡಿಯ ನಂದಿಪರ್ವತ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ ಅವರ ಹತ್ಯೆ ಖಂಡನೀಯ. ತನ್ನ ಜೀವನವನ್ನು ಸೇವೆಗಾಗಿ ಮುಡಿಪಾಗಿಟ್ಟ, ಜೀವನ ಪರ್ಯಂತ ಮಾನವ ಸಮುದಾಯಕ್ಕೆ ಶಾಂತಿಯ ಸಂದೇಶವನ್ನು ಸಾರುತ್ತಿದ್ದ ಜೈನ ಮುನಿಗಳ ಹತ್ಯೆ ಕೇವಲ ಒಂದು ಸಮುದಾಯಕ್ಕೆ ಮಾತ್ರವಲ್ಲದೆ ಸಮಸ್ತ ಮಾನವ ಸಮುದಾಯಕ್ಕೆ ಆಘಾತ ಉಂಟು ಮಾಡಿದೆ. ಎಂದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ರಾಷ್ಟ್ರೀಯ ಕಾರ್ಯಕಾರಿ ನಿರ್ದೇಶಕ ರೋಹಿತ್ ಕುಮಾರ್ ಕಟೀಲ್ ಹೇಳಿದ್ದಾರೆ

ಮನುಕುಲದ ಸೇವೆಗಾಗಿ ತಮ್ಮ ಆಸೆ, ಆಕಾಂಕ್ಷೆ, ಆಸ್ತಿ, ಸಂಪತ್ತು, ಕುಟುಂಬವನ್ನು ತ್ಯಜಿಸಿರುವ ಜೈನ ಮುನಿಗಳು ಒಂದು ಸಮುದಾಯಕ್ಕೆ ಸೀಮಿತವಾಗದೆ ಜಗತ್ತಿಗೆ ಶಾಂತಿ, ಅಹಿಂಸೆ ಸಂದೇಶ ನೀಡುವವರು. ಅವರ ಸದ್ಗುಣ, ಸಹಾಯವನ್ನು ದುರುಪಯೋಗ ಮಾಡಿಕೊಂಡು ಕೊಲೆ ಮಾಡುವ ಮಟ್ಟಕ್ಕೆ ಇಳಿದಿರುವ ಕೊಲೆಗಡುಕರನ್ನು ಸರಕಾರ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಂಡು ತಕ್ಷಣವೇ ಕಠಿಣ ಶಿಕ್ಷೆ ನೀಡಬೇಕು ಎಂದು ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ .

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News