ಪ್ರತ್ಯೇಕ ಪ್ರಕರಣ: ಇಬ್ಬರು ನಾಪತ್ತೆ
ಮಲ್ಪೆ, ಸೆ.9: ಕೊಡವೂರು ಗ್ರಾಮದ ಮೂಡುತೋಟ ನಿವಾಸಿ ಶರತ್(34) ಎಂಬವರು ಸೆ.7ರಂದು ಮನೆಯಿಂದ ಕೆಲಸಕ್ಕೆ ಹೋದವರು ಈವರೆಗೂ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರಿ: ಎಲ್ಲೂರು ನಿವಾಸಿ ಹರ್ಷಲ್ ಅಮೀನ್(32) ಎಂಬವರು ಸೆ.2ರಂದು ಮುಂಬೈಯಲ್ಲಿರುವ ಮಾವನ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.