ಉಡುಪಿ: 1935ರಲ್ಲಿ ಉಡುಪಿ ನಗರದ ಸಿಬಿ ರಸ್ತೆಯಲ್ಲಿ ಆರಂಭಗೊಂಡಿದ್ದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ದ ಒರಿಜಿನಲ್​ ಆಭರಣ ಜುವೆಲ್ಲರ್ಸ್ ನ ಮೂಲ ಮಳಿಗೆಯನ್ನು ಅತ್ಯಾಧುನಿಕ ಶೈಲಿಯಲ್ಲಿ ನವೀಕೃತಗೊಳಿಸಿದ್ದು, ಈ ನವೀಕೃತ ಶೋರೂಂ ಅ.21ರಂದು ಪುನಾರಂಭಗೊಳ್ಳಲಿದೆ.

ಆಭರಣ ಜುವೆಲ್ಲರ್ಸ್​ ಪೆವೇಟ್​ ಲಿ. ಸಂಸ್ಥೆಯ ಮೊದಲ ಮಳಿಗೆಯಾಗಿರುವ ಈ ಕಟ್ಟಡವು ಸುಮಾರು 9 ದಶಕಗಳಿಗೂ ಹೆಚ್ಚು ಕಾಲ ಸಂಸ್ಥೆಯ ಇತಿಹಾಸ ಹಾಗೂ ಗುರುತಿನೊಂದಿಗೆ ಬೆಸೆದುಕೊಂಡಿದೆ. ಪ್ರಸ್ತುತ ಈ ಶೋರೂಂ ಸಂಸ್ಥೆಯ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಉಡುಪಿಯಲ್ಲಿ ಒಂದು ಮಳಿಗೆಯಿಂದ ಆರಂಭಗೊಂಡಿದ್ದ ಆಭರಣ ಸಂಸ್ಥೆಯ ಪಯಣ ಇಂದು ಕರ್ನಾಟಕ ಹಾಗೂ ಗೋವಾದ 8 ಜಿಲ್ಲೆಗಳಲ್ಲಿ ಒಟ್ಟು 20 ಮಳಿಗೆಗಳನ್ನು ಹೊಂದಿದ್ದು, ಗ್ರಾಹಕರ ಮನೆಮಾತಾಗಿದೆ.

ಸಂಸ್ಥೆಯ ಅಧ್ಯಕ್ಷ ಮಧುಕರ್​ ಕಾಮತ್​ ಅವರ ದೂರದೃಷ್ಟಿಯ ಫಲವಾಗಿ ಈ ಸಂಸ್ಥೆ ಬೆಳೆದಿದ್ದು, ತನ್ನ ಭವ್ಯ ಪರಂಪರೆ ಹಾಗೂ ಗ್ರಾಹಕರೊಂದಿಗಿನ ಅನ್ಯೋನ್ಯವಾಗಿರುವ ಬಾಂಧವ್ಯವನ್ನು ಸಂಸ್ಥೆ ಉಳಿಸಿಕೊಂಡು ತನ್ನ ಮಾರುಕಟ್ಟೆಯನ್ನು ವಿಸ್ತರಿಸುತ್ತಿದೆ. ಸಂಸ್ಥೆಯು ಬೆಂಗಳೂರಿನ ಜಯನಗರದ 5 ನೇ ಬ್ಲಾಕ್​ನಲ್ಲಿ ತನ್ನ ಏಕೈಕ ಅಧಿಕೃತ ಮಳಿಗೆಯನ್ನು ಹೊಂದಿದೆ.

ಹೊಸ ಸ್ಪರ್ಶ :

ಉಡುಪಿ ನಗರದ ಸಿಬಿ ರಸ್ತೆಯಲ್ಲಿರುವ ಆಭರಣ ಜುವೆಲ್ಲರ್ಸ್​ನ ಮಳಿಗೆಯನ್ನು ಅತ್ಯಾಧುನಿಕವಾಗಿ ನವೀಕರಿಸಿದ್ದು, ಶೋರೂಂಗೆ ಹೊಸ ಸ್ಪರ್ಶ ನೀಡಲಾಗಿದೆ.

ಸಿಬಿ ರಸ್ತೆಯ ಮಳಿಗೆಯೇ ನಮ್ಮ ಸಂಸ್ಥೆಯ ಬೆಳವಣಿಗೆಯ ಪಯಣಕ್ಕೆ ನಾಂದಿ ಹಾಡಿದ ಸ್ಥಳ. ಈ ಮಳಿಗೆ ಹಾಕಿಕೊಟ್ಟಿರುವ ಭದ್ರ ಬುನಾದಿಯ ಮೇಲೆ ಪ್ರತಿಯೊಂದು ಮಳಿಗೆಯೂ ವಿಸ್ತರವಾಗಿದೆ. ಗ್ರಾಹಕರಿಗೆ ನವೀಕೃತ ವಾತಾವರಣದಲ್ಲಿ ಇನ್ನಷ್ಟು ಉತ್ತಮ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಈ ಮಳಿಗೆಯನ್ನು ಅತ್ಯಾರ್ಷಕವಾಗಿ ನವೀಕರಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಭಾಸ್​ ಎಂ. ಕಾಮತ್ ​ತಿಳಿಸಿದರು.

'ನಮ್ಮ ಸಂಸ್ಥೆಯ ಮೂಲ ಮೌಲ್ಯಗಳು ಹಾಗೂ ವೈಶಿಷ್ಟ್ಯವನ್ನು ಉಳಿಸಿಕೊಂಡು ಗ್ರಾಹಕರಿಗೆ ಸೇವೆ ನೀಡುವುದು ನಮ್ಮ ಆದ್ಯತೆಯಾಗಿದೆ. ಮಧುಕರ್​ ಕಾಮತ್​ ಅವರ ದೂರದೃಷ್ಟಿ ಇಂದಿಗೂ ನಮ್ಮ ಕಾರ್ಯಚಟುವಟಿಕೆಗಳಿಗೆ ಮಾರ್ಗದರ್ಶನವಾಗಿದೆ. ನವೀಕೃತ ಸಿಬಿ ರಸ್ತೆ ಮಳಿಗೆ ನಮ್ಮ ಪರಂಪರೆ ಮತ್ತು ಭವಿಷ್ಯದ ಬೆಳವಣಿಗೆಯ ಆಶಯಗಳ ನಡುವಿನ ಕೊಂಡಿಯಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಮಹೇಶ್​ ಎಂ.ಕಾಮತ್​ ತಿಳಿಸಿದರು.

ಉಡುಪಿ ಮೂಲದ ದ ಒರಿಜಿನಲ್​ ಆಭರಣ ಜುವೆಲ್ಲರ್ಸ್​ ಉಡುಪಿ ಕರ್ನಾಟಕ ಮತ್ತು ಗೋವಾದಲ್ಲಿ ಅತ್ಯಂತ ಪ್ರಸಿದ್ಧವಾದ ಆಭರಣ ಬ್ರ್ಯಾಂಡ್‌ ಆಗಿದ್ದು, ಉಡುಪಿ, ಮಂಗಳೂರು, ಬೆಂಗಳೂರು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಗೋವಾದ ಪಣಜಿ ಮತ್ತು ಮಡಗಾಂವ್​ ಸೇರಿದಂತೆ 17 ಸ್ಥಳಗಳಲ್ಲಿ ಒಟ್ಟು 20 ಮಳಿಗೆಗಳನ್ನು ಹೊಂದಿದೆ.

ಆಭರಣ ಜುವೆಲ್ಲರ್ಸ್​ ಸಂಸ್ಥೆಯು ಸುದೀರ್ಘ 90 ವರ್ಷಗಳ ಇತಿಹಾಸ, ನಂಬಿಕೆಯ ಪರಂಪರೆಯನ್ನು ಹೊಂದಿದ್ದು, ನ್ಯಾಯಯುತ ಬೆಲೆಯ ಭರವಸೆ, ನೈತಿಕ ವ್ಯವಹಾರ , ಅತ್ಯುತ್ತಮ ಕರಕುಶಲತೆ ಹಾಗೂ ಗುಣಮಟ್ಟದ ಭರವಸೆ ಈ ನಾಲ್ಕು ಪ್ರಮುಖ ಸ್ತಂಭಗಳ ಮೇಲೆ ನಿರ್ಮಿತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor