ಮಣಿಪಾಲ: ಉಡುಪಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಯುಸಿಸಿಐ)ಯ ಸಭೆ ಇತ್ತೀಚೆಗೆ ಮಣಿಪಾಲ್ ವ್ಯಾಲಿ ಕಂಟ್ರಿ ಕ್ಲಬ್‌ನಲ್ಲಿ ನಡೆಯಿತು.

ಸಭೆಯಲ್ಲಿ ಚೇಂಬರ್‌ನ ಮಾಸಿಕ ಪತ್ರಿಕೆಯನ್ನು ಸಂಸ್ಥೆಯ ಪೂರ್ವಾಧ್ಯಕ್ಷ ಅಮ್ಮುಂಜೆ ಪ್ರಭಾಕರ ನಾಯಕ್ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಯುಸಿಸಿಐ ಅಧ್ಯಕ್ಷ ನಟರಾಜ್ ಪ್ರಭು, ಉಪಾಧ್ಯಕ್ಷ ಡಾ. ವಿಜಯೇಂದ್ರ ರಾವ್, ಗೌರವ ಕಾರ್ಯದರ್ಶಿ ಮೊಹಮ್ಮದ್ ಸಮೀರ್, ಖಜಾಂಚಿ ಕೆ. ವಿನೋದ್ ಪೈ ಹಾಗೂ ಪತ್ರಿಕೆಯ ಸಂಪಾದಕ ಡಾ. ವಿಲಾಸ್ ಪೈ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ ನಾಯಕ್ ಹಾಗೂ ಮಾಜಿ ಕಾರ್ಯದರ್ಶಿ ಡಾ.ವಿಜಯೇಂದ್ರ ರಾವ್ ಅವರನ್ನು ಸಂಸ್ಥೆಗೆ ಸಲ್ಲಿಸಿದ ಅಮೂಲ್ಯ ಸೇವೆ ಮತ್ತು ಕೊಡುಗೆಗಳನ್ನು ಗುರುತಿಸಿ ಗೌರವಿಸಲಾಯಿತು.

ಜಂಟಿ ಕಾರ್ಯದರ್ಶಿಗಳಾದ ಅವಿನಾಶ್ ಪೂಜಾರಿ ಮತ್ತು ಅನೀಶ್ ಪೈ ಕಾರ್ಯಕ್ರಮ ನಿರೂಪಿಸಿದರು. ಯುಸಿಸಿಐ ನಿರ್ದೇಶಕರಾದ ನಾಗರಾಜ್ ಹೆರ್ಬ್ಬಾ, ಅತುಲ್ ಭಕ್ತ, ವಾಲ್ಟರ್ ಸಲ್ದಾನ್ಹಾ, ಶ್ರೀಪತಿ ಭಟ್ ಹಾಗೂ ಸಂತೋಷ್ ಶೆಟ್ಟಿ ಸಹಕರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor