ಶಿರ್ವ : ಅಲ್ಪ ಮಾನವ ವಿಶ್ವಮಾನವನಾಗಿ ಎತ್ತರದ ಶಿಖರಕ್ಕೆ ಏರಬೇಕು. ಬದುಕುವ ಕಲೆಯನ್ನು ರೂಢಿಸಿಕೊಳ್ಳಬೇಕು. ಶಿಬಿರಗಳು ಕಾಯಕದ ಜೊತೆಯಲ್ಲಿ ಸಾಮರಸ್ಯ ಅರಳಿಸಿ, ಆಚಾರ, ನಡೆನುಡಿಗಳಲ್ಲಿ ಬದಲಾವಣೆ ತರುವಲ್ಲಿ ಪೂರಕವಾಗಬೇಕು ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.

ಮರ್ಣೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಉಡುಪಿ ಜೆಐಇ-ಕೋ ಆಪರೇಟಿವ್ ಸೊಸೈಟಿ ಅಂಗ ಸಂಸ್ಥೆಯಾದ ಮೂಡುಬೆಳ್ಳೆ ನೆಲ್ಲಿಕಟ್ಟೆ ಜ್ಞಾನಗಂಗಾ ಪ.ಪೂ. ಕಾಲೇಜಿನ 10ನೇ ವರ್ಷದ ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್) ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಯಾದವ ದೇವಾಡಿಗ ವಹಿಸಿದ್ದರು. ವೇದಿಕೆಯಲ್ಲಿ ಉದ್ಯಮಿ ನಿರಂಜನ್ ಭಟ್, ಬೆಳ್ಳೆ ಸಿ.ಎ ಬ್ಯಾಂಕ್ ಅಧ್ಯಕ್ಷ ಶಿವಾಜಿ ಎಸ್.ಸುವರ್ಣ, ಮರ್ಣೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ ಕಾಮತ್, ಶಾಲಾ ಮುಖ್ಯ ಶಿಕ್ಷಕ ಕೃಷ್ಣ ನಾಯ್ಕ್, ಪ್ರಭಾಕರ ಕೆ.ಎಸ್., ಮರ್ಣೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕರುಣಾಕರ ಕರ್ಕೇರಾ, ಶುಭ ಹಾರೈಸಿದರು.

ಕಾಲೇಜಿನ ಪ್ರಾಚಾರ್ಯ ಲೀನಾ ಎಸ್.ನಾಯಕ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಬಿರದ ಯೋಜನಾಧಿಕಾರಿ ಭಾಸ್ಕರ ಆಚಾರ್ಯ ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಉಪನ್ಯಾಸಕಿ ಪ್ರತಿಮಾ ಸನ್ಮಾನಿತರನ್ನು ಪರಿಚುಸಿದರು. ಎನ್‌ಎಸ್‌ಎಸ್ ನಾಯಕಿ ತ್ರಿಷಾ, ನಾಯಕ ಆರ್ಯನ್ ಶೆಟ್ಟಿ ವೇದಿಕೆಯಲ್ಲಿದ್ದರು. ಉಪನ್ಯಾಸಕಿಯರಾದ ಸುಶ್ಮಿತಾ, ಪ್ರಮೀಳಾ ನಿರೂಪಿಸಿದರು. ಉಪನ್ಯಾಸಕಿ ದಿವ್ಯಾ ವಂದಿಸಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor