ಉಡುಪಿ : ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ತೇಜಸ್ವಿ ಅವರ 88ನೇ ಜನ್ಮದಿನದ ಪ್ರಯುಕ್ತ, ತೇಜಸ್ವಿ ಅವರ ಪ್ರಸಿದ್ಧ ಕಾದಂಬರಿ ಕರ್ವಾಲೊ ಕೃತಿ ಆಧಾರಿತ ಡಿಜಿಟಲ್ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸ್ಪರ್ಧಿಗಳು ಕರ್ವಾಲೊ ಕಾದಂಬರಿಯ ಯಾವುದೇ ಒಂದು ಸನ್ನಿವೇಶ, ಪಾತ್ರ, ಸಂಭಾಷಣೆ, ಭಾವನೆ ಅಥವಾ ದೃಶ್ಯವನ್ನು ಆಧರಿಸಿ ಡಿಜಿಟಲ್ ಚಿತ್ರವನ್ನು ರಚಿಸಬೇಕು. ಸ್ಪರ್ಧೆಯನ್ನು 18 ವರ್ಷದೊಳಗಿನವರು ಹಾಗೂ 18 ವರ್ಷ ಮೇಲ್ಪಟ್ಟವರು ಎಂಬ ಎರಡು ವಿಭಾಗಗಳಲ್ಲಿ ಆಯೋಜಿಸಲಾಗಿದ್ದು, ಎರಡೂ ವಿಭಾಗಗಳಲ್ಲಿ ಪ್ರಥಮ ಬಹುಮಾನ 20,000ರೂ., ದ್ವಿತೀಯ ಬಹುಮಾನ 10,000ರೂ., ತೃತೀಯ ಬಹುಮಾನ 5,000ರೂ. ಹಾಗೂ ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು.

ಚಿತ್ರಗಳನ್ನು ಸಲ್ಲಿಸಲು ಆ.29 ಕೊನೆಯ ದಿನವಾಗಿದ್ದು, ಸೆ.5ರಂದು ವಿಜೇತರ ಹೆಸರನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗುವುದು. ಸೆ.8ರಂದು ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ನಡೆಯುವ ತೇಜಸ್ವಿ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ.ನಂ: 9663098873, 9449309067 ಅಥವಾ mtt|wus|.wgmbio.eom ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor