ಉಡುಪಿ | ಬ್ರಹ್ಮಾವರದಲ್ಲಿರುವ ಎಸ್.ಎಲ್.ಆರ್.ಎಂ. ಘಟಕದಲ್ಲಿ ಬೆಂಕಿ ಅವಘಡ
Update: 2025-03-01 10:52 IST
ಉಡುಪಿ: ಬ್ರಹ್ಮಾವರದಲ್ಲಿರುವ ವಾರಂಬಳ್ಳಿ ಪಂಚಾಯತ್ ಗೆ ಸೇರಿರುವ ಎಸ್.ಎಲ್.ಆರ್.ಎಂ. ಘಟಕ (ತ್ಯಾಜ್ಯ ನಿರ್ವಹಣಾ ಘಟಕ)ದಲ್ಲಿ ಶನಿವಾರ ಮುಂಜಾನೆ ಭಾರೀ ಬೆಂಕಿ ಅವಘಡ ಸಂಭವಿಸಿದೆ.
ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಘಟನೆಯಿಂದಾಗಿ ತ್ಯಾಜ್ಯ ಸಂಗ್ರಹ ವಾಹನವೊಂದು ಸ್ಫೋಟಗೊಂಡಿದೆ ಎನ್ನಲಾಗಿದೆ.
ಬೆಂಕಿಯು ಕೆನ್ನಾಲಗೆಗೆ ಎಸ್.ಎಲ್.ಆರ್.ಎಂ. ಘಟಕ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಯಂತ್ರೋಪಕರಣಗಳು ಮತ್ತು ಉಪಕರಣಗಳಿಗೆ ಹಾನಿಯಾಗಿದೆ.
ಮಲ್ಪೆ, ಉಡುಪಿ, ಕುಂದಾಪುರದ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಮತ್ತು ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.