ಉಡುಪಿ: ಅಪಾಯ ಆಹ್ವಾನಿಸುತ್ತಿರುವ ಕಾಂಕ್ರೀಟ್ ರಸ್ತೆಯ ಕಂಬಿಗಳು!
ಉಡುಪಿ: ಬನ್ನಂಜೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಸನಿಹ ಹಾದುಹೋಗುವ 169ಎ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಂಕ್ರಿಟ್ ಕಿತ್ತೆದ್ದು ಹೋಗಿ ಗುಂಡಿಗಳು ಬಿದ್ದಿವೆ. ಇಲ್ಲಿ ಮೇಲೆದ್ದಿರುವ ಕಂಬಿಗಳು ಅಪಾಯವನ್ನು ಆಹ್ವಾನಿಸುತ್ತಿದೆ.
ವಾಹನ ಅಪಘಾತಕ್ಕೆ ಕಾರಣವಾಗಿತ್ತಿರುವ, ಈ ಸ್ಥಳದಲ್ಲಿ ಪಾದಚಾರಿಗಳು ನಡೆದು ಸಾಗುತ್ತಿರುವಾಗ ಕಂಬಿಗಳು ಕಾಲಿಗೆ ಸಿಲುಕಿ ಗಾಯಾಳಾಗಿರುವ ಘಟನೆಗಳು ನಡೆದಿವೆ. ನ.28ರಂದು ಇದೇ ಹೆದ್ದಾರಿಯಲ್ಲಿ ಆದಿಉಡುಪಿ ಹೆಲಿಪ್ಯಾಡ್ ಬಳಿಯಿಂದ ಪ್ರಧಾನಿ ನರೇಂದ್ರ ಮೋದಿ ಶ್ರೀಕೃಷ್ಣ ಮಠಕ್ಕೆ ಬಂದು, ಮರಳಿ ತರೆಳುವ ಹಾದಿ ಇದೆಂದು ಹೇಳಲಾಗುತ್ತಿದೆ.
ಈ ಸಂದರ್ಭ ಬೆಂಗಾವಲು ಪಡೆಯ ವಾಹನಗಳು, ಮಂತ್ರಿ ಮಹೋದಯರ ವಾಹನಗಳು ಶರವೇಗದಲ್ಲಿ ಸಾಗುತ್ತಿರುತ್ತವೆ. ಹಾಗಾಗಿ ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಕ್ಷಣವಾಗಿ ಶಿಥಿಲಗೊಂಡಿರುವ ಹೆದ್ದಾರಿ ದುರಸ್ತಿ ಪಡಿಸುವಂತೆ ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.