ಉಡುಪಿ | ವಾರಸುದಾರರ ಪತ್ತೆಗೆ ಸೂಚನೆ
Update: 2025-08-08 21:38 IST
ಉಡುಪಿ, ಆ.8: ಚಿಕಿತ್ಸೆಗೆಂದು ನಗರದ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಲಾಗಿದ್ದ ಮೂಲತಃ ಚೇರ್ಕಾಡಿ ಗ್ರಾಮದ ಶೇಖರ್ (65) ಎಂಬ ವ್ಯಕ್ತಿಯು ಪ್ರಸ್ತುತ ಗುಣಮುಖರಾಗಿದ್ದು, ಈ ವ್ಯಕ್ತಿಯ ಸಂಬಂಧಿಕರು /ವಾರಾಸುದಾರರು ಯಾರಾದರೂ ಇದ್ದಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ, ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಬನ್ನಂಜೆ ಉಚಿತ ಸಹಾಯವಾಣಿ ಸಂಖ್ಯೆ 1090 ಅಥವಾ ದೂ.ಸಂಖ್ಯೆ: 0820-2526394 ಅನ್ನು ಸಂಪರ್ಕಿಸಬಹುದು ಎಂದು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಆಪ್ತ ಸಮಾಲೋಚಕರ ಪ್ರಕಟಣೆ ತಿಳಿಸಿದೆ.