ಉಡುಪಿ, ನ.26: ಉಡುಪಿ ಧರ್ಮಪ್ರಾಂತದ ಹಿರಿಯ ಧರ್ಮಗುರು ವಂ. ಚಾರ್ಲ್ಸ್ ಲೂವಿಸ್ (81) ಗುರುವಾರ ನಿಧನರಾದರು. ಉಡುಪಿ ಜಿಲ್ಲೆಯ ಕುಂದಾಪುರದ ಪಡುಕೋಣೆಯಲ್ಲಿ 1945 ನವೆಂಬರ್ 23ರಂದು ಜನಿಸಿದ್ದ ಅವರು, 1971ರಲ್ಲಿ ಧರ್ಮಗುರುಗಳಾಗಿ ದೀಕ್ಷೆಯನ್ನು ಸ್ವೀಕರಿಸಿದ್ದರು.

ವಂ. ಚಾರ್ಲ್ಸ್ ಲೂವಿಸ್ ಅವರು ಮೊದಲು ಬಜ್ಪೆಯಲ್ಲಿ ನಂತರ ಪುತ್ತೂರಿ ನಲ್ಲಿ ಸಹಾಯಕ ಧರ್ಮಗುರುಗಳಾಗಿ ತಮ್ಮ ಧಾರ್ಮಿಕ ಸೇವೆಯನ್ನು ಆರಂಭಿಸಿದ್ದರು. ಬಳಿಕ 1973ರಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಾಪ್ಲೆನ್ ಆಗಿ ಸೇವೆ ಸಲ್ಲಿಸಿದರು. 1974ರಿಂದ ಅದ್ಯಪಾಡಿ, ಕೊಳಲಗಿರಿ, ಅಗ್ರಾರ್, ಕಾಟಿಪಳ್ಳ, ಮೂಡುಬೆಳ್ಳೆ, ಕುಂತಲನಗರ, ಪಾಂಬೂರು ಹಾಗೂ ತ್ರಾಸಿ ಚರ್ಚುಗಳಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದರು.

ನಿವೃತ್ತಿಯ ಬಳಿಕ 2021ರಿಂದ 2023ರವರೆಗೆ ಬಸ್ರೂರಿನಲ್ಲಿ ವಾಸವಾಗಿದ್ದ ಅವರು, 2023ರಿಂದ ಕಲ್ಯಾಣಪುರದ ನಿವೃತ್ತ ಧರ್ಮಗುರುಗಳ ನಿವಾಸ ಮಿಲಾಗ್ರಿಸ್ ಹೋಮ್‌ನಲ್ಲಿ ನೆಲೆಸಿದ್ದರು. ಧರ್ಮಗುರು ವಂ.ಚಾರ್ಲ್ಸ್ ಲೂವಿಸ್ ಅವರ ನಿಧನಕ್ಕೆ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅತಿ ವಂ. ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜಾ, ನಿವೃತ್ತ ಧರ್ಮಾಧ್ಯಕ್ಷರಾದ ಅತಿ ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ, ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫ್ರಾನ್ಸಿಸ್ ಲೂವಿಸ್, ಕುಲಪತಿ ವಂ.ಸ್ಟೀವನ್ ಡಿಸೋಜಾ ಸಂತಾಪ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor