ಉಡುಪಿ| ಬಾಲಕಿಯ ಮೇಲೆ ಅತ್ಯಾಚಾರ ಆರೋಪ: ಇಬ್ಬರ ಬಂಧನ
ಪೋಕ್ಸೋ ಪ್ರಕರಣ
Update: 2026-05-27 20:18 IST
ಉಡುಪಿ, ಮೇ 27: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೋಕ್ಸೊ ಕಾಯಿದೆಯಡಿ ಉಡುಪಿ ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ತೆಕ್ಕಟ್ಟೆಯ ಜಿತೇಂದ್ರ ಹಾಗೂ ಸುಶಾನ್ ಬಂಧಿತ ಆರೋಪಿಗಳು.
ಇವರಿಬ್ಬರು 17ವರ್ಷ ವಯಸ್ಸಿನ ಬಾಲಕಿಯನ್ನು ಲಾಡ್ಜ್‌ಗೆ ಕರೆದುಕೊಂಡು ಹೋಗಿ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದು, ನಂತರ ಆರೋಪಿಗಳು ಆಕೆಯಿಂದ ಮೋಸ ಮಾಡುವ ಉದ್ದೇಶದಿಂದ ಒಟ್ಟು 71 ಗ್ರಾಂ ಚಿನ್ನಾಭರಣಗಳನ್ನು ಪಡೆದುಕೊಂಡಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.