ಭಟ್ಕಳ: ಭಾರತೀಯ ಕಿಸಾನ್ ಸಂಘದ ರಾಜ್ಯ ಮುಖಂಡ ಶ್ರೀಧರ ಹೆಬ್ಬಾರ ಹಾಕೋಡ್ಲು ನಿಧನ
Update: 2026-06-15 21:36 IST
ಭಟ್ಕಳ: ಭಾರತೀಯ ಕಿಸಾನ್ ಸಂಘದ ರಾಜ್ಯ ಮುಖಂಡ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಹಾಗೂ ರೈತ ಮುಖಂಡ, ಪ್ರಗತಿಪರ ರೈತ ಶ್ರೀಧರ ಎಸ್ ಹೆಬ್ಬಾರ ಹಾಕೋಡ್ಲು (74) ಅವರು ಅನಾರೋಗ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರರು, ಒಬ್ಬಳು ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸದಾ ರೈತರ ಪರವಾಗಿ ಧ್ವನಿ ಎತ್ತುತ್ತಿದ್ದ ಅವರು ಭಟ್ಕಳದಲ್ಲಿ ಭಾರತೀಯ ಕಿಸಾನ್ ಸಂಘ ಶಾಖೆ ಆರಂಭ ಮಾಡಿ ವಿದ್ಯುತ್ ದರ ಏರಿಕೆ ಸೇರಿದಂತೆ ಹಲವು ರೈತಪರ ಹೋರಾಟ ನಡೆಸಿದ್ದರು. ಹವ್ಯಕ ಸಮಾಜದ ಮುಖಂಡರೂ ಆಗಿದ್ದ ಅವರು ಉತ್ತಮ ಸಲಹೆಗಾರರು, ಮಾರ್ಗದರ್ಶಕರೂ ಕೂಡ ಆಗಿದ್ದರು. ಕಳೆದ ಹಲವು ವರ್ಷಗಳಿಂದ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ರೈತರ ಒಡನಾಡಿಯಾಗಿ ಕೆಲಸ ಮಾಡಿ ಮೆಚ್ಚುಗೆ ಗಳಿಸಿದ್ದರು. ಇವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.