ತರಬಿಯತ್ ಎಜುಕೇಶನ್ ಸೊಸೈಟಿಗೆ ಪದಾಧಿಕಾರಿಗಳ ಆಯ್ಕೆ; ಅಧ್ಯಕ್ಷರಾಗಿ ಇಕ್ಬಾಲ್ ಇಕ್ಕೇರಿ ಆಯ್ಕೆ
ಭಟ್ಕಳ: ಇಲ್ಲಿನ ಪ್ರತಿಷ್ಟಿತ ಶೈಕ್ಷಣಿಕ ಸಂಸ್ಥೆಯಾದ ತರಬಿಯತ್ ಎಜುಕೇಶನ್ ಸೊಸೈಟಿಯ ಮುಂದಿನ ನಾಲ್ಕ ವರ್ಷದ ಅವಧಿಗಾಗಿ (2026ರ ಜುಲೈನಿಂದ 2030ರ ಜುಲೈವರೆಗೆ) ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರಾಗಿ ಮುಹಮ್ಮದ್ ಇಕ್ಬಾಲ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಮೌಲಾನಾ ಜಿಯಾಉರ್ ರಹ್ಮಾನ್ ರುಕ್ನುದ್ದೀನ್ ನದ್ವಿ ಅವರನ್ನು ಉಪಾಧ್ಯಕ್ಷರಾಗಿ, ಮೌಲಾನಾ ಸಯ್ಯದ್ ಕುತುಬ್ ಬರ್ಮಾವರ್ ನದ್ವಿ ನ್ಯೂ ಶಮ್ಸ್ ಸ್ಕೂಲ್ ಮತ್ತು ಶಮ್ಸ್ ಪದವಿ ಪೂರ್ವ ಕಾಲೇಜು ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಯಾಗಿ, ಡಾ. ಓವೈಸ್ ಖ್ವಾಜಾ ರುಕ್ನುದ್ದೀನ್ ಹಣಕಾಸು ಕಾರ್ಯದರ್ಶಿಯಾಗಿ, ಹಾಗೂ ಸಯ್ಯದ್ ಲಂಕಾ ಜಿಯಾಉಲ್ ಹಕ್ ಲೆಕ್ಕಪರಿಶೋಧಕರಾಗಿ ನೇಮಕ ಮಾಡಲಾಗಿದೆ.
ಸಭೆಯಲ್ಲಿ ಶಿಕ್ಷಣ ಮಂಡಳಿಯನ್ನೂ ಪುನರ್‌ರಚಿಸಲಾಗಿದ್ದು, ನಜೀರ್ ಅಹ್ಮದ್ ಖಾಝಿ, ಮೌಲಾನಾ ಸಯ್ಯದ್ ಅಹ್ಮದ್ ಸಾಲಿಕ್ ಬರ್ಮಾವರ್ ನದ್ವಿ, ಅಬ್ದುಲ್ ತವ್ವಾಬ್ ಅಕ್ರಮಿ, ಸಯ್ಯದ್ ಜುಹೈರ್ (ಎಸ್.ಎಂ. ಮಾರ್ಕೆಟ್), ಸಯ್ಯದ್ ರಿಯಾನ್ ಬರ್ಮಾವರ್, ಮೌಲಾನಾ ಝಾಕಿರುಲ್ ಹಕ್ ಉಮ್ರಿ, ಅಬ್ದುಲ್ ಮುನೀಮ್ ರುಕ್ನುದ್ದೀನ್, ನವೀದ್ ಐಕ್ರಿ, ಸಯ್ಯದ್ ಮಕ್ಬೂಲ್ ಎಸ್.ಎಂ. ಹಾಗೂ ಯೂನುಸ್ ರುಕ್ನುದ್ದೀನ್ ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.
ಸುಮಾರು 55 ವರ್ಷಗಳಿಂದ ತರಬಿಯತ್ ಎಜುಕೇಶನ್ ಸೊಸೈಟಿಯು ನ್ಯೂ ಶಮ್ಸ್ ಶಾಲೆ, ಶಮ್ಸ್ ಪಿಯು ಕಾಲೇಜು ಹಾಗೂ ಅಲ್ ಕೌಸರ್ ಗರ್ಲ್ಸ್ ಕಾಲೇಜುಗಳ ಮೂಲಕ ಭಟ್ಕಳ ಮತ್ತು ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶೈಕ್ಷಣಿಕ, ಧಾರ್ಮಿಕ ಹಾಗೂ ನೈತಿಕ ಶಿಕ್ಷಣವನ್ನು ನೀಡುತ್ತಿದ್ದು, ಶಿಕ್ಷಣದ ಜೊತೆಗೆ ಕ್ರೀಡೆ ಮತ್ತು ವ್ಯಕ್ತಿತ್ವ ವಿಕಸನಕ್ಕೂ ವಿಶೇಷ ಆದ್ಯತೆ ನೀಡುತ್ತಿದೆ.
ಸಭೆಯಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಮುಹ್ತಶಮ್, ಮಾಜಿ ಶಾಲಾ ಶಿಕ್ಷಣ ಮಂಡಳಿ ಅಧ್ಯಕ್ಷ ನಜೀರ್ ಅಹ್ಮದ್ ಖಾಝಿ ಹಾಗೂ ಕಳೆದ ಎರಡು ಅವಧಿಯಲ್ಲಿ ಸೇವೆ ಸಲ್ಲಿಸಿದ ಪದಾಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿ ಅಭಿನಂದಿಸಲಾಯಿತು.