ಭಟ್ಕಳ: ಭಟ್ಕಳ ಬಂದರಿನಿಂದ ಸುಮಾರು 10 ನಾಟಿಕಲ್ ಮೈಲು ದೂರ ಹಾಗೂ ನೇತ್ರಾಣಿ ದ್ವೀಪದ ಸಮೀಪ ಸಮುದ್ರದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ಮೃತದೇಹವು ಸುಮಾರು 6–7 ದಿನಗಳ ಹಿಂದೆ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ವ್ಯಕ್ತಿಯದ್ದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತ ವ್ಯಕ್ತಿಯ ವಯಸ್ಸು ಸುಮಾರು 40ರಿಂದ 50 ವರ್ಷ, ಎತ್ತರ ಸುಮಾರು 5 ಅಡಿ 8 ಇಂಚು ಹಾಗೂ ಬಿಳಿ ವರ್ಣ ಹೊಂದಿದ್ದಾನೆ. ಕಂದು ಬಣ್ಣದ ನಿಕ್ಕರ್ ಧರಿಸಿದ್ದಾನೆ. ಬಲಗೈ ಮೇಲೆ ಕತ್ತಿಯ ಗುರುತು ಹಾಗೂ ಕೆಂಪು ದಾರ ಕಂಡುಬಂದಿದೆ.

ಸಮುದ್ರ ಜೀವಿಗಳ ಕಡಿತದಿಂದ ಮೃತದೇಹದ ಮುಖಕ್ಕೆ ಹಾನಿಯಾಗಿರುವುದರಿಂದ ಸದ್ಯ ಗುರುತು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಕರಾವಳಿ ಭದ್ರತಾ ಪೊಲೀಸ್ ಠಾಣೆಯ ಪಿಎಸ್‌ಐ ವೀಣಾ ಚಿತ್ರಾಪುರ ಅವರು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೃತನ ಗುರುತು ಹಾಗೂ ಸಾವಿನ ನಿಖರ ಕಾರಣ ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor