ಭಟ್ಕಳ: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ವಿಶೇಷ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರ ಭವಿಷ್ಯ ರೂಪಿಸಲು ಶಿಕ್ಷಕರು ಮತ್ತು ಪೋಷಕರು ಪ್ರಯತ್ನಿಸಬೇಕು ಎಂದು ಅಸುರ್‌ಲೈನ್ ಫ್ರಾನ್ಸಿಸ್ಕನ್‌ನ ಮಂಗಳೂರು ಪ್ರಾಂತದ ಮುಖ್ಯಸ್ಥೆ ರೆ. ಸಿಸ್ಟರ್ ಕ್ಲಾರಾ ಮೆನೆಜಸ್ ಹೇಳಿದರು.

ಇಲ್ಲಿನ ಆನಂದ ಆಶ್ರಮ ಕಾನ್ವೆಂಟ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ ಮಾತನಾಡಿ, ಕಠಿಣ ಪರಿಶ್ರಮ ಮತ್ತು ಸಾಧನೆಗೆ ಬಡತನ ಅಡ್ಡಿಯಾಗ ಲಾರದು ಎಂದರು. ಹಿರಿಯ ನ್ಯಾಯವಾದಿ ವಿ.ಎಫ್. ಗೋಮ್ಸ್, ಶಾಲೆ ಉತ್ತಮ ವ್ಯಕ್ತಿತ್ವ ರೂಪಿಸುವ ಕೇಂದ್ರವಾ ಗಿದ್ದು, ಜೀವನ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದರು. ಹಿರಿಯ ಪತ್ರಕರ್ತ ಹಾಗೂ ಇಂಡಿಯನ್ ನವಾಯತ್ ಫೋರಂ ಅಧ್ಯಕ್ಷ ಅಫ್ತಾಬ್ ಹುಸೇನ್ ಕೋಲಾ, ವಿದ್ಯಾರ್ಥಿಗಳು ಪರಿಸರ ಮತ್ತು ಸಾಮಾಜಿಕ ಕಾಳಜಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ರೆ. ಫಾದರ್ ಪ್ರಶಾಂತ್ ಫೆರ್ನಾಂಡೀಸ್ ಆಶೀರ್ವಚನ ನೀಡಿದರು.

ಕಾನ್ವೆಂಟ್ ಮ್ಯಾನೇಜರ್ ರೆ. ಸಿಸ್ಟರ್ ಲೂಸಿ ಡಿಸೋಜಾ, ಪಿಟಿಎ ಉಪಾಧ್ಯಕ್ಷ ನ್ಯಾಯವಾದಿ ಮನೋಜ್ ಕುಮಾರ್, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲವೀನಾ ಜೆ. ಡಿಸೋಜಾ, ಐರಿನ್ ಮಥಾಯಿಸ್, ಸಿಸ್ಟರ್ ಅನಿತಾ ಪಿಂಟೋ ಹಾಗೂ ವಿನುತಾ ಡಿಸೋಜಾ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ವಿವಿಧ ವಿಷಯಗಳ ಕುರಿತ ನೃತ್ಯ, ಕರಾಟೆ ಪ್ರದರ್ಶನ ಹಾಗೂ ಕಿರು ನಾಟಕ ಪ್ರದರ್ಶಿಸಿದರು. ಶಿಕ್ಷಕರ ನೃತ್ಯವೂ ಗಮನ ಸೆಳೆಯಿತು. ಶಾಲಾ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor