×
Ad

ಹರಪನಹಳ್ಳಿ | ಅಂಬಿಗರ ಚೌಡಯ್ಯನವರ ವಚನಗಳು ಸಮಾಜಕ್ಕೆ ದಾರಿದೀಪ : ಕಣಿವಿಹಳ್ಳಿ ಮಂಜುನಾಥ

Update: 2026-01-21 21:19 IST

ಹರಪನಹಳ್ಳಿ : ಶಿಷ್ಟ ಸಾಹಿತಿ ಬಸವಣ್ಣನಾದರೆ, ಗಾಂಭೀರ್ಯದ ಸಾಹಿತಿ ಅಂಬಿಗರ ಚೌಡಯ್ಯನವರು ಆಗಿದ್ದಾರೆ. ಅವರ ಕಠೋರ ಹಾಗೂ ಖಂಡನಾತ್ಮಕ ವಚನಗಳು ಸಕಲ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತವೆ ಎಂದು ವಕೀಲ ಕಣಿವಿಹಳ್ಳಿ ಮಂಜುನಾಥ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ರಾಜೀವ್ ಗಾಂಧಿ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಹಾಗೂ ಮಹಾಯೋಗಿ ವೇಮನ ಜಯಂತೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಂಬಿಗರ ಚೌಡಯ್ಯ 12ನೇ ಶತಮಾನದಲ್ಲಿ ಸಮಾಜದಲ್ಲಿದ್ದ ಅಂಕುಡೊಂಕುಗಳನ್ನು ಚಾಟಿ ಏಟಿನಂತ ವಚನಗಳ ಮೂಲಕ ತಿದ್ದಿದ ನಿಜಶರಣರಾಗಿದ್ದರು. ಸತ್ತು ಬದುಕುವುದು, ಸಾವಿನವರೆಗೂ ಬದುಕುವುದು, ಸಾವಿನ ನಂತರವೂ ಬದುಕುವವರು ತ್ಯಾಗಿಗಳು. ಪರಹಿತ ಚಿಂತಕರಾಗಿ ತಮ್ಮ ಇಡೀ ಜೀವನವನ್ನು ಸಮಾಜದ ಒಳಿತಿಗಾಗಿ ಸವೆಸಿದ ಮಹಾನ್ ಶರಣ ಎಂದು ಅವರು ಹೇಳಿದರು.

ತಹಶಿಲ್ದಾರ ಬಿ.ಬಿ. ಗಿರೀಶ್ ಬಾಬು ಮಾತನಾಡಿದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಇಓ ಚಂದ್ರಶೇಖರ್, ವೇದ ಭಾಷಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗಂಗಾಧರ್, ನಿವೃತ್ತ ಜಿಲ್ಲಾ ಮೀನುಗಾರಿಕೆ ಸಹಾಯಕ ನಿರ್ದೇಶಕ ಪವಾಡಿ ಬಸವರಾಜ್, ಸಮಾಜದ ಉಪಾಧ್ಯಕ್ಷ ಜೆ.ಕೊಟ್ರೇಶ್, ಕಾರ್ಯದರ್ಶಿ ಪವಾಡಿ ದೇವೇಂದ್ರ, ಬಾಗಳಿ ಬಿ.ವೈ. ಹಾಲೇಶ್, ಕೋಟಿ ಭೀಮಪ್ಪ, ಹರಸನಾಳ ಬಸವರಾಜ್, ಚಿಗಟೇರಿ ಸುರೇಶ್, ಸಿಂಗ್ರಿಹಳ್ಳಿ ನಿಂಗಪ್ಪ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ದೈಹಿಕ ಶಿಕ್ಷಕ ದೇವರಾಜ್ ನೆರವೇರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News