ಹರಪನಹಳ್ಳಿ | ತೌಡೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ.ದೊಡ್ಡ ಸಿದ್ದಪ್ಪ ಅವಿರೋಧ ಆಯ್ಕೆ
ಹರಪನಹಳ್ಳಿ: ತಾಲೂಕಿನ ತೌಡೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಬಿ. ದೊಡ್ಡ ಸಿದ್ದಪ್ಪ (ಪುಟ್ಟಪ್ಪ) ಅಧ್ಯಕ್ಷರಾಗಿ ಮತ್ತು ಪಿ. ಶೇಖರ್ ನಾಯ್ಕ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಹಿಂದಿನ ಅಧ್ಯಕ್ಷ ಕ್ಯಾರಕಟ್ಟೆ ಶಿವಯೋಗಿ ಮತ್ತು ಉಪಾಧ್ಯಕ್ಷ ಡಿ.ಕೆ. ಪರಸಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಈ ಚುನಾವಣೆ ಆಯೋಜಿಸಲಾಗಿತ್ತು. ನಿಗದಿತ ಅವಧಿಯೊಳಗೆ ಅಧ್ಯಕ್ಷ ಸ್ಥಾನಕ್ಕೆ ಬಿ. ದೊಡ್ಡ ಸಿದ್ದಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪಿ. ಶೇಖರ್ ನಾಯ್ಕ್ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ, ಬೇರೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆಗಿರುವ ಸಹಕಾರ ಅಭಿವೃದ್ಧಿ ಅಧಿಕಾರಿ ಜಿ.ಎಸ್. ಸುರೇಂದ್ರ ಪ್ರಕಟಿಸಿದರು.
ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಬಳ್ಳಾರಿಯ ಮಾಜಿ ಸಂಸದ ವೈ. ದೇವೇಂದ್ರಪ್ಪ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ ಸಾಹುಕಾರ್ ಅವರನ್ನು ಭೇಟಿ ಮಾಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಯರಬಳ್ಳಿ ಎಂ. ವಿಜಯ್ ಕುಮಾರ್, ಮಾಜಿ ಅಧ್ಯಕ್ಷ ಶಿವಯೋಗಿ, ಡಿ.ಕೆ. ಪರಸಪ್ಪ, ಕೊಟ್ರಗೌಡ, ಕೆ. ಭರಮಪ್ಪ, ಕೆ. ಮಂಜುನಾಥಯ್ಯ, ಮಲ್ಲಮ್ಮ, ಗಣೇಶ, ಪುತ್ರಮ್ಮ, ಕಾಮಪ್ಪ, ಮಲ್ಲೇಶ್, ಡಿ.ಸಿದ್ದಪ್ಪ, ಕೆಂಚಪ್ಪ ಹಾಗೂ ಬಾಲೆನಹಳ್ಳಿ ಕೆಂಚನಗೌಡ ಸೇರಿದಂತೆ ಸಂಘದ ನಿರ್ದೇಶಕರು ಮತ್ತು ಮುಖಂಡರು ಉಪಸ್ಥಿತರಿದ್ದರು.