Harapanahalli | ವಾಲ್ಮೀಕಿ ಸಮಾಜದ ಮುಖಂಡ ದ್ಯಾಮಜ್ಜಿ ದುರುಗಪ್ಪ ನಿಧನ
ಹರಪನಹಳ್ಳಿ: ನಗರದ ವಾಲ್ಮೀಕಿ ನಗರದ ನಿವಾಸಿ ಹಾಗೂ ವಾಲ್ಮೀಕಿ ಸಮಾಜದ ಮುಖಂಡ ದ್ಯಾಮಜ್ಜಿ ದುರುಗಪ್ಪ (59) ಗುರುವಾರ ಬೆಳಿಗ್ಗೆ ನಿಧನರಾದರು.
ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ದ್ಯಾಮಜ್ಜಿ ದುರುಗಪ್ಪ ಅವರ ನಿಧನಕ್ಕೆ ವೀರಯ್ಯ ಸಣ್ಣ ಹಾಲಸ್ವಾಮಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ. ಹಾಲೇಶ್, ನಗರಸಭೆ ಮಾಜಿ ಸದಸ್ಯ ದ್ಯಾಮಜ್ಜಿ ರೊಕ್ಕಪ್ಪ, ಮುಖಂಡರಾದ ಆರ್. ಲೋಕೇಶ್, ಗಿಡ್ಡಳ್ಳಿ ನಾಗರಾಜ್, ಎಲ್.ಬಿ. ಹಾಲೇಶ್ ನಾಯ್ಕ್, ಕಂಚಿಕೇರಿ ಎಂ.ಬಿ. ಅಂಜಿನಪ್ಪ, ಯಡಿಹಳ್ಳಿ ಶೇಖರಪ್ಪ, ಮಗಾನಹಳ್ಳಿ ಉದಯ ಶಂಕರ್, ಪಟ್ನಾಮದ ನಾಗರಾಜ್, ಪಟ್ನಾಮದ ದುರುಗಣ್ಣ, ಕಂಭಟ್ರಹಳ್ಳಿ ರಾಜಪ್ಪ, ತಳವಾರ ಚಂದ್ರಪ್ಪ, ಸುರೇಶ್ ಮಂಡಕ್ಕಿ, ದ್ಯಾಮಜ್ಜಿ ದಂಡ್ಯೆಪ್ಪ, ನಿಟ್ಟೂರು ಸಣ್ಣ ಹಾಲಪ್ಪ, ದ್ಯಾಮಜ್ಜಿ ಹನುಮಂತ, ನಿಟ್ಟೂರು ತಿಮ್ಮಣ್ಣ, ದ್ಯಾಮಜ್ಜಿ ಆನಂದ, ದ್ಯಾಮಜ್ಜಿ ಕೃಷ್ಣಾ, ಪಿ. ಪರಶುರಾಮ, ಗುಡಿ ನಾಗರಾಜ್, ಗುಡೇಕೋಟೆ ಕೇರಿ ಅಂಜಿನಪ್ಪ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ.