×
Ad

ವಿಜಯನಗರ ಜಿಲ್ಲಾ ಕಾಂಗ್ರೆಸ್ ವತಿಯಿಂದ 77ನೇ ಗಣರಾಜ್ಯೋತ್ಸವ ಆಚರಣೆ

Update: 2026-01-26 19:40 IST

ವಿಜಯನಗರ: ಜಿಲ್ಲೆಯ ಹೊಸಪೇಟೆಯ ಕೊಂದನಾಯಕನ ಹಳ್ಳಿಯಲ್ಲಿ ಇರುವ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಅಯೋಜಿಸಲಾಯಿತು. 

ಈ ವೇಳೆ ಸಚಿವ ಝಮೀರ್ ಅಹ್ಮದ್ ಖಾನ್ ಮಾತನಾಡಿದರು. ಜಿಲ್ಲಾಧ್ಯಕ್ಷರಾದ ಸಿರಾಜ್ ಶೇಖ್, ಮಾಜಿ ಲೋಕಸಭೆ ಸದಸ್ಯರಾದ ಐ.ಜಿ.ಸನದಿ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಿತು.  

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಕೆ ಎಂ ಹಾಲಪ್ಪ, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಮಾಮ್ ನಿಯಾಜಿ, ವಕ್ಫ್ ಸಲಹಾ ಸಮಿತಿ ಜಿಲ್ಲಾಧ್ಯಕ್ಷ ಕೆ.ಎಸ್.ದಾದಾಪೀರ , ಜಿಲ್ಲಾ ಉಪಾಧ್ಯಕ್ಷ ಕೆ ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಕಮಲಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಖಾಜಾ ಹುಸೇನ್, ಸೇವಾದಳ ಜಿಲ್ಲಾ ಸಂಘಟಕ ಬಿ.ಮಾರೆಣ್ಣ, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ತಮ್ಮನ್ನೆಳ್ಳಪ್ಪ, ಇನ್ ಟೆಕ್ ಸಮಿತಿ ಜಿಲ್ಲಾಧ್ಯಕ್ಷ ಏಕಂಬ್ರೇಶ ನಾಯ್ಕ, ವಿಜಯನಗರ ಜಿಲ್ಲಾ ಮಾಧ್ಯಮ ವಕ್ತಾರ ಉಡೇದ್ ಗುರು ಬಸವರಾಜ್, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಶೇಖ್ ತಾಜುದ್ದೀನ್, ಇಮ್ತಿಯಾಜ್, ಭಾರತ್‌ ಕುಮಾರ್, ಎಂ.ಡಿ.ರಫೀಕ್, ಪರಶುರಾಮ, ಸೊಹೇಲ್, ನಗರಸಭೆ ಸದಸ್ಯ ಮುನ್ನಿ ಖಾಸಿಂ, ದಾದಾ ಖಲಂದರ್, ವಿಜಯ್‌ ಕುಮಾರ್, ಸೊಮಶೇಖರ್‌, ರಾಮಾಂಜಿನಿ, ಪಿ.ಇಂದುಮತಿ, ನಾಗಮ್ಮ, ಲಕ್ಷ್ಮೀಮ್ಮ, ಅಮೀನಾ, ಯೋಗ ಲಕ್ಷ್ಮೀ ,ಬಾನುಬೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News