ವಿಜಯನಗರ | ಮನೆಗೊಡೆ ಕುಸಿತ : ಮಹಿಳೆಗೆ ಗಾಯ
Update: 2025-06-10 16:07 IST
ವಿಜಯನಗರ : ಜೂ.9 ರಂದು ಸುರಿದ ಭಾರೀ ಮಳೆಗೆ ಮನೆಗೊಡೆ ಕುಸಿದು ಮಹಿಳೆಯೊರ್ವರು ಗಾಯಗೊಂಡಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಡೆಲಡಕು ಗ್ರಾಮದಲ್ಲಿ ನಡೆದಿದೆ.
ಮನೆಗೊಡೆ ಕುಸಿದ ಪರಿಣಾಮ ಹನುಮಕ್ಕ ಎಂಬ ಮಹಿಳೆ ಗಾಯಗೊಂಡಿದ್ದು, ಅವರನ್ನು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.