ಹೊಸಪೇಟೆ | ಮಾಬುಸಾಬ್ ಕೊಲೆ ಪ್ರಕರಣ : 9 ಆರೋಪಿಗಳ ಬಂಧನ
ಮಾಬುಸಾಬ್
ಹೊಸಪೇಟೆ : ಹಳೇ ದ್ವೇಷ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಗಲಾಟೆ ಬಿಡಿಸಲು ಹೋದ ಮಾಬುಸಾಬ್ ಅವರನ್ನು ಕೊಲೆ ಮಾಡಿದ್ದ 9 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಭಂಗಿ ಹನುಮಂತ, ಚರಣ, ಹುಲಿಗೆಮ್ಮ, ರಾಘವೇಂದ್ರ, ಚಂದ್ರಶೇಖರ್, ಗುರಯ್ಯ, ದರ್ಶನ್, ಮಾಲಿಂಗಪ್ಪ, ಗುರುಸಿದ್ದಯ್ಯ ಹಿರೇಮಠ ಎಂದು ಗುರುತಿಸಲಾಗಿದೆ.
ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆ ಹಿನ್ನಲೆ : ಡಿ.18 ರಂದು ಹೊಸಪೇಟೆ ತಾಲೂಕಿನ ಕಾರಿಗನೂರು ಗ್ರಾಮದಲ್ಲಿ ಮನೆಯ ಮುಂದೆ ಕ್ಷುಲ್ಲಕ ಕಾರಣಕ್ಕೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ಮಾಬುಸಾಬ್ ಅವರ ಮೇಲೆ 9 ಜನ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಮೃತಪಟ್ಟ ಮಾಬುಸಾಬ್ ಅವರ ಮಗ ಪಿ.ಜಿಲಾನ್ ಹೊಸಪೇಟೆಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ನೀಡಿದ್ದರು.
ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಹೊಸಪೇಟೆ ಡಿಎಸ್ಪಿ ಟಿ.ಮಂಜುನಾಥ್, ಪೊಲೀಸ್ ಇನ್ಸ್ಪೆಕ್ಟರ್ ಆರ್.ಕೆ.ಗುರುರಾಜ್, ಡಿ.ಹುಲುಗಪ್ಪ, ವಿಕಾಸ ಲಮಾಣಿ, ಪ್ರಹ್ಲಾದ್ ಚನ್ನಗಿರಿ, ಡಿ.ದುರುಗಪ್ಪ, ಪಿಎಸ್ಐ ಕೋದಂಡಪಾಣಿ, ಅಶೋಕ ಬೆವೂರು, ನಾಗರತ್ನ, ಸಿಬ್ಬಂದಿ ರಾಘವೇಂದ್ರ ಬೇವಿನಮರದ, ಜಾವೀದ್, ನಾಗರಾಜ್ ಬರಡಿ, ಮಂಜುನಾಥ್ ಮೇಟಿ, ಕೊಟ್ರೇಶ್.ವಿ, ರಾಘವೇಂದ್ರ, ಶ್ರೀನಾಥ್, ಸಂತೋಷ್ ನಾಯ್ಕ್, ಪ್ರವೀಣ್ ಕುಮಾರ್, ಪರಶುರಾಮ್ ನಾಯ್ಕ್, ನಾಗರಾಜ್ ಬಂಡಿಮೇಗಳ, ಯು.ಚಂದ್ರಶೇಖರ್, ಸಣ್ಣ ಗಾಳೆಪ್ಪ, ಕೆ.ಅಡಿವೆಪ್ಪ, ಎಂ ಸಂತೋಷ್ ಕುಮಾರ್, ಬಿ.ಚಂದ್ರಪ್ಪ, ಕುಮಾರ್ ನಾಯ್ಕ್, ಫಕೀರಪ್ಪ, ದೇವೇಂದ್ರಪ್ಪ, ಲಿಂಗರಾಜ್ ರವರನ್ನೊಳಗೊಂಡ ವಿಶೇಷ ತಂಡಕ್ಕೆ ವಿಜಯನಗರ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಎಸ್.ಜಾಹ್ನವಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಿ.ಮಂಜುನಾಥ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.