Vijayanagara | ಎಸ್‌ಐಆರ್ : ಜಿಲ್ಲೆಯಲ್ಲಿ ಶೇ.100ರಷ್ಟು ಗಣತಿ ನಮೂನೆ ವಿತರಣೆ
ವಿಜಯನಗರ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಚುರುಕುಗೊಂಡಿದ್ದು, ಒಟ್ಟು 11,42,732 ಮತದಾರರಿಗೆ ಗಣತಿ ನಮೂನೆಗಳನ್ನು ಶೇ.100ರಷ್ಟು ವಿತರಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ.
ಜೂನ್ 30ರಿಂದ ಆರಂಭವಾಗಿರುವ ಎಸ್‌ಐಆರ್ ಅಭಿಯಾನವು ಆಗಸ್ಟ್ 8ರವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಣೆ ಹಾಗೂ ನಮೂನೆಗಳ ಡಿಜಿಟಲೀಕರಣ ಕಾರ್ಯವನ್ನು ಕೈಗೊಳ್ಳುತ್ತಿದ್ದಾರೆ.
ಜಿಲ್ಲೆಯ 1,234 ಮತಗಟ್ಟೆ ಮಟ್ಟದ ಅಧಿಕಾರಿಗಳು 11.42 ಲಕ್ಷ ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸಿದ್ದು, 88-ಹಡಗಲಿ ಕ್ಷೇತ್ರದಲ್ಲಿ 218 ಮತಗಟ್ಟೆಗಳ ಮೂಲಕ 2,01,396 ಮತದಾರರಿಗೆ ನಮೂನೆ ವಿತರಿಸಲಾಗಿದೆ. ಈ ಪೈಕಿ 95,323 ನಮೂನೆಗಳು ಡಿಜಿಟಲೀಕರಣಗೊಂಡಿದ್ದು, 1,000 ಮೃತ, 561 ಶಾಶ್ವತವಾಗಿ ಸ್ಥಳಾಂತರಗೊಂಡ, 312 ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡ ಹಾಗೂ 16 ಅಲಭ್ಯ ಮತದಾರರನ್ನು ಗುರುತಿಸಲಾಗಿದೆ.
89-ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ 254 ಮತಗಟ್ಟೆಗಳ ಮೂಲಕ 2,43,632 ಮತದಾರರಿಗೆ ನಮೂನೆ ವಿತರಿಸಲಾಗಿದ್ದು, 1,20,481 ನಮೂನೆಗಳು ಡಿಜಿಟಲೀಕರಣಗೊಂಡಿವೆ. ಅಲ್ಲದೆ 1,772 ಮೃತ, 1,385 ಸ್ಥಳಾಂತರಗೊಂಡ, 462 ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡ ಹಾಗೂ 49 ಅಲಭ್ಯ ಮತದಾರರನ್ನು ಗುರುತಿಸಲಾಗಿದೆ.
90-ವಿಜಯನಗರ ಕ್ಷೇತ್ರದಲ್ಲಿ 259 ಮತಗಟ್ಟೆಗಳ ಮೂಲಕ 2,52,788 ಮತದಾರರಿಗೆ ನಮೂನೆ ವಿತರಿಸಲಾಗಿದ್ದು, 1,37,723 ನಮೂನೆಗಳು ಡಿಜಿಟಲೀಕರಣಗೊಂಡಿವೆ. ಇಲ್ಲಿ 1,637 ಮೃತ, 1,389 ಸ್ಥಳಾಂತರಗೊಂಡ, 493 ಆನ್‌ಲೈನ್ ನೋಂದಣಿ ಹಾಗೂ 19 ಅಲಭ್ಯ ಮತದಾರರ ಮಾಹಿತಿ ಸಂಗ್ರಹಿಸಲಾಗಿದೆ.
96-ಕೂಡ್ಲಿಗಿ ಕ್ಷೇತ್ರದಲ್ಲಿ 250 ಮತಗಟ್ಟೆಗಳ ಮೂಲಕ 2,16,002 ಮತದಾರರಿಗೆ ನಮೂನೆ ವಿತರಿಸಲಾಗಿದ್ದು, 1,36,326 ನಮೂನೆಗಳು ಡಿಜಿಟಲೀಕರಣಗೊಂಡಿವೆ. ಜೊತೆಗೆ 1,524 ಮೃತ, 1,079 ಸ್ಥಳಾಂತರಗೊಂಡ, 409 ಆನ್‌ಲೈನ್ ನೋಂದಣಿ ಹಾಗೂ 10 ಅಲಭ್ಯ ಮತದಾರರನ್ನು ಗುರುತಿಸಲಾಗಿದೆ.
104-ಹರಪನಹಳ್ಳಿ ಕ್ಷೇತ್ರದಲ್ಲಿ 253 ಮತಗಟ್ಟೆಗಳ ಮೂಲಕ 2,28,914 ಮತದಾರರಿಗೆ ನಮೂನೆ ವಿತರಿಸಲಾಗಿದ್ದು, 1,18,560 ನಮೂನೆಗಳು ಡಿಜಿಟಲೀಕರಣಗೊಂಡಿವೆ. ಅಲ್ಲದೆ 1,744 ಮೃತ, 1,118 ಸ್ಥಳಾಂತರಗೊಂಡ, 844 ಆನ್‌ಲೈನ್ ನೋಂದಣಿ ಹಾಗೂ 19 ಅಲಭ್ಯ ಮತದಾರರನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.