×
Ad

FIFA ಅಖಾಡದಲ್ಲಿ ಮಹಾ ತಿರುವು | ಆರು ತಂಡಗಳು ಸೇಫ್; ಯಾರು ನಾಕೌಟ್ಗೆ, ಯಾರು ಮನೆಗೆ?

Update: 2026-06-23 20:16 IST

Photo Credit : AP

ಆರು ತಂಡಗಳು ಈಗಾಗಲೇ ಮುಂದಿನ ಹಂತಕ್ಕೆ ಅರ್ಹತೆ ಪಡೆದಿವೆ. ಗುಂಪು ಹಂತದ ಅನೇಕ ಪಂದ್ಯಗಳು ಇನ್ನೂ ನಡೆಯಬೇಕಾಗಿರುವುದರಿಂದ ಅನೇಕ ರಾಷ್ಟ್ರಗಳು ಈ ನಾಕೌಟ್ ಸುತ್ತಿಗೆ ಸೇರುವ ಉತ್ತಮ ಸ್ಥಾನದಲ್ಲಿವೆ.

ಫಿಫಾ ವಿಶ್ವಕಪ್ 2026 ಗುಂಪು ಹಂತವು ನಿರ್ಣಾಯಕ ಘಟ್ಟವನ್ನು ಪ್ರವೇಶಿಸುತ್ತಿದ್ದು, 12 ಗುಂಪುಗಳಲ್ಲಿನ ತಂಡಗಳು ನಾಕೌಟ್ ಸುತ್ತಿನಲ್ಲಿ ಸ್ಥಾನಕ್ಕಾಗಿ ಹೋರಾಡುತ್ತಿರುವೆ. 48 ತಂಡಗಳ ಪೈಕಿ ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಮತ್ತು ಎಂಟು ಅತ್ಯುತ್ತಮ ಮೂರನೇ ಸ್ಥಾನದಲ್ಲಿರುವ ತಂಡಗಳು 32ರ ಸುತ್ತಿಗೆ ಮುನ್ನಡೆಯುತ್ತವೆ.

ಆರು ತಂಡಗಳು ಈಗಾಗಲೇ ಮುಂದಿನ ಹಂತಕ್ಕೆ ಅರ್ಹತೆ ಪಡೆದಿವೆ. ಅವುಗಳೆಂದರೆ ನಾರ್ವೆ, ಫ್ರಾನ್ಸ್, ಅರ್ಜೆಂಟಿನಾ, ಜರ್ಮನಿ, ಅಮೆರಿಕ ಮತ್ತು ಮೆಕ್ಸಿಕೊ. ಈ ತಂಡಗಳು ಆರಂಭಿಕ ಎರಡು ಪಂದ್ಯಗಳಿಂದ ಆರು ಅಂಕಗಳನ್ನು ಗಳಿಸಿವೆ. ಹೀಗಾಗಿ ಆಯಾ ಗುಂಪುಗಳಲ್ಲಿ ಅಗ್ರ ಎಡು ಸ್ಥಾನಗಳನ್ನು ಪಡೆಯುವುದು ಖಚಿತ. ಗುಂಪು ಹಂತರ ಅನೇಕ ಪಂದ್ಯಗಳು ಇನ್ನೂ ನಡೆಯಬೇಕಾಗಿರುವ ಕಾರಣದಿಂದ ಅನೇಕ ರಾಷ್ಟ್ರಗಳು ಈ ನಾಕೌಟ್ ಸುತ್ತಿಗೆ ಸೇರುವ ಉತ್ತಮ ಸ್ಥಾನದಲ್ಲಿವೆ.

►32ನೇ ಸುತ್ತಿಗೆ ಅರ್ಹತೆ ಪಡೆದ ತಂಡಗಳು

- ಗ್ರೂಪ್ ‘ಐ’ ನಿಂದ ನಾರ್ವೆ ಮತ್ತು ಫ್ರಾನ್ಸ್

ನಾರ್ವೆ ಮತ್ತು ಫ್ರಾನ್ಸ್ ತಮ್ಮ ಮೊದಲ ಎರಡು ಪಂದ್ಯಗಳನ್ನು ಗೆದ್ದು ನಾಕೌಟ್ಗೆ ಅರ್ಹತೆ ಪಡೆದ ಇತ್ತೀಚೆಗಿನ ತಂಡಗಳು. ನಾರ್ವೆ ಇರಾಕ್ ಮತ್ತು ಸೆನೆಗಲ್ ಅನ್ನು ಸೋಲಿಸಿದರೆ, ಫ್ರಾನ್ಸ್ ಸೆನೆಗಲ್ ಮತ್ತು ಇರಾಕ್ ವಿರುದ್ಧ ಜಯಗಳಿಸಿವೆ. ಎರಡೂ ತಂಡಗಳ ಬಳಿ ಆರು ಅಂಕಗಳಿವೆ. ಸೆನೆಗಲ್ ಮತ್ತು ಇರಾಕ್ ಶೂನ್ಯ ಅಂಕದಲ್ಲಿವೆ. ಒಂದು ಪಂದ್ಯ ಮಾತ್ರ ಬಾಕಿ ಇರುವಾಗ ಕೊನೆಯ ಎರಡು ತಂಡಗಳು ಗರಿಷ್ಠ ಮೂರು ಅಂಕಗಳಿಸಬಹುದು. ಹೀಗಾಗಿ ನಾರ್ವೆ ಮತ್ತು ಫ್ರಾನ್ಸ್ ಮೊದಲ ಎರಡು ಸ್ಥಾನ ಪಡೆಯುತ್ತವೆ.

- ಗ್ರೂಪ್ ‘ಜೆ’ ನಿಂದ ಅರ್ಜೆಂಟೀನಾ

ಅರ್ಜೆಂಟೀನಾ ತನ್ನ ಮೊದಲ ಎರಡು ಪಂದ್ಯಗಳಲ್ಲಿ ಅಲ್ಜೀರಿಯವನ್ನು 3-0 ಮತ್ತು ಆಸ್ಟ್ರಿಯವನ್ನು 2-0ದಲ್ಲಿ ಸೋಲಿಸಿದೆ. ಆರು ಅಂಕಗಳನ್ನು ಗಳಿಸಿರುವ ಕಾರಣ ನಾಕೌಟ್ನಲ್ಲಿ ಸ್ಥಾನ ದೃಢಪಟ್ಟಿದೆ.

- ಗ್ರೂಪ್ ‘ಇ’ ನಿಂದ ಜರ್ಮನಿ

ಜರ್ಮನಿ ಪಂದ್ಯಾವಳಿಯಲ್ಲಿ ಪ್ರಭಾವಶಾಲಿ ತಂಡಗಳಲ್ಲಿ ಒಂದಾಗಿದೆ. ತಮ್ಮ ಆರಂಭಿಕ ಪಂದ್ಯದಲ್ಲಿ ಕೊರಾಕಾವೊವನ್ನು 7-1 ಅಂತರದಿಂದ ಸೋಲಿಸಿದ ನಂತರ ಐವರಿ ಕೋಸ್ಟ್ ವಿರುದ್ಧ 2-1 ಅಂತರದಿಂದ ಜಯ ಸಾಧಿಸಿದೆ. ಒಟ್ಟು ಒಂಭತ್ತು ಗೋಲು ಬಾರಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ.

-ಗ್ರೂಪ್ ‘ಡಿ’ ಯಿಂದ ಅಮೆರಿಕ

ಅಮೆರಿಕ ತವರಿನ ಅನುಕೂಲ ಸದುಪಯೋಗಿಸಿಕೊಂಡಿದೆ. ಪರಾಗ್ವೆಯನ್ನು 4-1ರಿಂದ ಮತ್ತು ಆಸ್ಟ್ರೇಲಿಯವನ್ನು 2-0 ಯಿಂದ ಸೋಲಿಸಿ ಆರು ಅಂಕ ಪಡೆದು ನಾಕೌಟ್ ಹಂತಕ್ಕೆ ಅರ್ಹತೆ ಪಡೆದಿದೆ.

-ಗ್ರೂಪ್ ‘ಎ’ ಯಿಂದ ಮೆಕ್ಸಿಕೊ

ದಕ್ಷಿಣ ಆಫ್ರಿಕಾ ವಿರುದ್ಧ 2-0 ಮತ್ತು ದಕ್ಷಿಣ ಕೊರಿಯ ವಿರುದ್ಧ 1-0 ಅಂತರದಿಂದ ಜಯಗಳಿಸಿ 32ನೇ ಸುತ್ತನ್ನು ಪ್ರವೇಶಿಸಿದೆ.

►ಪ್ರಬಲ ಪೈಪೋಟಿಯಲ್ಲಿರುವ ತಂಡಗಳು

- ಕೆನಡಾ ಮತ್ತು ಸ್ವಿಝರ್ಲ್ಯಾಂಡ್ (ಗ್ರೂಪ್ ಬಿ)

ಕೆನಡಾ ಮತ್ತು ಸ್ವಿಝರ್ಲ್ಯಾಂಡ್ ತಲಾ ನಾಲ್ಕು ಅಂಕಗಳ ಜೊತೆಗೆ ಗ್ರೂಪ್ ಬಿಯಲ್ಲಿ ಅಗ್ರಸ್ಥಾನದಲ್ಲಿವೆ. ಎರಡೂ ತಂಡಗಳು ತಮ್ಮ ಅರ್ಹತಾ ಅವಕಾಶ ಬಲಪಡಿಸಲು ಸೋಲು ತಪ್ಪಿಸಬೇಕು ಅಥವಾ ಅಂತಿಮ ಪಂದ್ಯದ ದಿನದಂದು ಅನುಕೂಲಕರ ಫಲಿತಾಂಶ ಪಡೆಯಬೇಕು.

- ಬ್ರೆಝಿಲ್ ಮತ್ತು ಮೊರಕ್ಕೊ (ಗುಂಪು ಸಿ)

ಬ್ರೆಝಿಲ್ ಮತ್ತು ಮೊರಕ್ಕೊ ತಲಾ ನಾಲ್ಕು ಅಂಕಗಳೊಂದಿಗೆ ಗುಂಪು C ಯಲ್ಲಿ ಮುನ್ನಡೆಯಲ್ಲಿವೆ. ಸ್ಕಾಟ್ಲೆಂಡ್ ಮೂರು ಅಂಕಗಳೊಂದಿಗೆ ಬೆನ್ನು ಬಿದ್ದಿದೆ. ಅಂತಿಮ ಸುತ್ತಿನ ಪಂದ್ಯಗಳಿಗೆ ಪ್ರವೇಶಿಸುವ ಅತ್ಯಂತ ಸ್ಪರ್ಧಾತ್ಮಕ ಗುಂಪುಗಳಲ್ಲಿ ಒಂದಾಗಿದೆ.

- ನೆದರ್ಲ್ಯಾಂಡ್ ಮತ್ತು ಜಪಾನ್ (ಗ್ರೂಪ್ ಎಫ್)

ನೆದರ್ಲ್ಯಾಂಡ್ಸ್ ಮತ್ತು ಜಪಾನ್ ತಲಾ ನಾಲ್ಕು ಅಂಕಗಳನ್ನು ಹೊಂದಿದ್ದು, ಪ್ರಸ್ತುತ ಅರ್ಹತೆಗೆ ಸಮೀಪದಲ್ಲಿರವೆ. ಸ್ವೀಡನ್ ಮೂರು ಅಂಕಗಳೊಂದಿಗೆ ನಿಕಟವಾದ ಸ್ಪರ್ಧೆಯಲ್ಲಿದೆ.

-ಸ್ಪೇನ್ (ಗ್ರೂಪ್ ಎಚ್)

ಸ್ಪೇನ್ ನಾಲ್ಕು ಅಂಕಗಳೊಂದಿಗೆ ಗುಂಪು ಎಚ್ನಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಇನ್ನೂ ಒಂದು ಗೋಲು ಬಿಟ್ಟುಕೊಟ್ಟಿಲ್ಲ. ಉರುಗ್ವೆ ಮತ್ತು ಕೇಪ್ ವರ್ಡೆ ಎರಡು ಅಂಕಗಳೊಮದಿಗೆ ಸಮಬಲದಲ್ಲಿವೆ. ಆದರೆ ಸೌದಿ ಅರೆಬಿಯಾ ಇನ್ನೂ ಮುನ್ನಡೆಯುವ ಹೊರಗಿನ ಅವಕಾಶ ಹೊಂದಿದೆ.

- ಈಜಿಪ್ಟ್ (ಗ್ರೂಪ್ ಜಿ)

ಈಜಿಪ್ಟ್ ಗ್ರೂಪ್ ಜಿನಲ್ಲಿ ನಾಲ್ಕು ಅಂಕಗಳೊಂದಿಗೆ ಮುನ್ನಡೆಯಲ್ಲಿದೆ. ಬೆಲ್ಜಿಯಂ ಜೊತೆಗೆ ಡ್ರಾ ಮತ್ತು ನ್ಯೂಜಿಲ್ಯಾಂಡ್ ಜತೆಗೆ ಗೆಲುವು ಸಾಧಿಸಿದೆ. ಇರಾನ್ ಮತ್ತು ಬೆಲ್ಜಿಯಂ ಎರಡು ಅಂಕಗಳನ್ನು ಹೊಂದಿವೆ. ಹೀಗಾಗಿ ಅಂತಿಮ ಸುತ್ತಿನ ಪಂದ್ಯ ಸಂಘರ್ಷದಿಂದ ಕೂಡಿರಲಿದೆ.

►ಪ್ರಸ್ತುತ ಎರಡನೇ ಸ್ಥಾನದಲ್ಲಿರುವ ತಂಡಗಳು

ಪ್ರಸ್ತುತ ಹಂತದಲ್ಲಿ ಪಂದ್ಯ ಮುಗಿದಲ್ಲಿ ಗ್ರೂಪ್ 32 ಹಂತಕ್ಕೆ ಪ್ರವೇಶ ಸಿಗಬಹುದಾದ ತಂಡಗಳು

* ದಕ್ಷಿಣ ಕೊರಿಯ

* ಸ್ವಿಝರ್ಲ್ಯಾಂಡ್

* ಮೊರಕ್ಕೊ

* ಆಸ್ಟ್ರೇಲಿಯ

* ಐವರಿಕೋಸ್ಟ್

* ಜಪಾನ್

* ಇರಾನ್

* ಉರುಗ್ವೆ

* ಆಸ್ಟ್ರಿಯ

* ಡಿಆರ್ ಕಾಂಗೋ

* ಘಾನಾ

►ತೃತೀಯ ಹಂತದಲ್ಲಿರುವ ತಂಡಗಳು

ಪಂದ್ಯಾವಳಿಗೆ ವಿಸ್ತೃತ ರೂಪ ನೀಡಿರುವ ಕಾರಣದಿಂದ ಮೂರನೇ ಸ್ಥಾನಗಳಿಸುವ ತಂಡದ ವಿಶ್ವಕಪ್ ನಿರೀಕ್ಷೆ ಕೊನೆಗೊಳ್ಳುವುದಿಲ್ಲ. ಪ್ರಸ್ತುತ ಅಂಕಪಟ್ಟಿಯ ಆಧಾರದ ಮೇಲೆ ಬಲಿಷ್ಠ ಮೂರನೇ ಸ್ಥಾನದಲ್ಲಿರುವ ತಂಡಗಳು ಹೀಗಿವೆ:

* ಸ್ಕಾಟ್ಲಂಡ್

* ಪೆರುಗ್ವೆ

* ಸ್ವೀಡನ್

* ಬೆಲ್ಜಿಯಂ

* ಕೇಪ್ ವರ್ಡೆ

* ಈಕ್ವೆಡಾರ್

* ಜೆಕಿಯಾ

* ಬೋಸ್ನಿಯಾ ಮತ್ತು ಹರ್ಜೆಗೋವಿನಾ

►ಬಹಳ ಕಠಿಣ ಹೋರಾಟ ನಡೆಸಬೇಕಾಗಿರುವ ತಂಡಗಳು

ಪಂದ್ಯದಲ್ಲಿ ಜೀವಂತವಾಗಿರಬೇಕೆಂದರೆ ಜಯ ಗಳಿಸುವುದು ಅನಿವಾರ್ಯವಾಗಿರುವ ತಂಡಗಳೆಂದರೆ ಕತಾರ್, ಹೈಟಿ, ಟರ್ಕಿ, ಕುರೊಕೊವೊ, ಟುನಿಷಿಯ, ನ್ಯೂಝಿಲೆಂಡ್, ಸೌದಿ ಅರೆಬಿಯ, ಸೆನೆಗಲ್, ಇರಾಕ್, ಅಲ್ಜೀರಿಯ, ಜೋರ್ಡನ್, ಪನಾಂ, ಕ್ರೊವೇಷಿಯ ಮತ್ತು ಉಜ್ಬೇಕಿಸ್ತಾನ್.

ಅನೇಕ ಗುಂಪುಗಳಲ್ಲಿ ಇನ್ನೂ ಪಂದ್ಯಗಳು ಮುಗಿದಿರುವ ಕಾರಣ 32 ಹಂತಕ್ಕೆ ಹೋಗುವ ಅತ್ಯುತ್ತಮ ಅವಕಾಶವಿರುವ ತಂಡಗಳೆಂದರೆ, ಕೆನಡಾ, ಸ್ವಿಜರ್ಲ್ಯಾಂಡ್, ಬ್ರೆಜಿಲ್, ಮೊರೊಕ್ಕೊ, ನೆದರ್ಲ್ಯಾಂಡ್, ಜಪಾನ್, ಸ್ಪೇನ್ ಮತ್ತು ಈಜಿಪ್ತ್.

ಪಂದ್ಯಾವಳಿಯ ವೇಳಾಪಟ್ಟಿ ಹೀಗಿದೆ:

* ಗುಂಪು ಹಂತ: ಜೂನ್ 11ರಿಂದ ಜೂನ್ 27

* 32ನೇ ಸುತ್ತು: ಜೂನ್ 28 ರಿಂದ ಜುಲೈ 3

* 16 ನೇ ಸುತ್ತು: ಜುಲೈ 4-7

* ಕ್ವಾರ್ಟರ್ಫೈನಲ್: ಜುಲೈ 9-11

* ಸೆಮಿಫೈನಲ್: ಜುಲೈ 14-15

* ಕಂಚಿನ ಪದಕದ ಪಂದ್ಯ: ಜುಲೈ 18

* ಅಂತಿಮ ಸುತ್ತು: ಜುಲೈ 19

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News