×
Ad

ಹಿಂದೂ ಮಹಾಸಾಗರದಲ್ಲಿ ಅಡಗಿದೆಯೇ ಮುಂಗಾರು ರಹಸ್ಯ? ಭಾರತಕ್ಕೆ ಮುಂಗಾರು ಬಾರದಿರಲು ಇದೇ ಕಾರಣ!

Update: 2026-06-03 23:18 IST

Photo: WIndy

ಆರಂಭದಲ್ಲಿ ಮೇ 15ರೊಳಗೆ ಮಳೆ ಬರುವ ನಿರೀಕ್ಷೆಯನ್ನು ಭಾರತೀಯ ಹವಾಮಾನ ಇಲಾಖೆ ಮುಂದಿಟ್ಟಿತ್ತು. ನಂತರ ಆ ದಿನಾಂಕವನ್ನು ಅನೇಕ ಬಾರಿ ಪರಿಷ್ಕರಿಸಿದ್ದು, ವಿಳಂಬವಾಗುತ್ತಲೇ ಇದೆ.

ಜೂನ್ ಪ್ರಾರಂಭವಾದರೂ ಭಾರತ ಮುಂಗಾರು ಮಳೆಗಾಗಿ ಕಾಯುತ್ತಲೇ ಇದೆ. ಸಾಮಾನ್ಯವಾಗಿ ಜೂನ್ 1ರ ಸುಮಾರಿಗೆ ಕೇರಳಕ್ಕೆ ಮಳೆ ಆಗಮಿಸುತ್ತದೆ. ಬೇಸಗೆಯ ತೀವ್ರ ಶಾಖದಿಂದ ಪರಿಹಾರ ನೀಡಿ ಕೃಷಿಯ ಋತುವಿಗೆ ಮುನ್ನುಡಿ ಬರೆಯುತ್ತದೆ. ಆದರೆ ಈ ವರ್ಷ ಮಳೆ ವಿಳಂಬವಾಗಿದೆ. ಹೀಗಾಗಿ ಜನರು ಮಳೆಯ ನಿರೀಕ್ಷೆಯಲ್ಲಿದ್ದಾರೆ.

ಆರಂಭದಲ್ಲಿ ಮೇ 15ರೊಳಗೆ ಮಳೆ ಬರುವ ನಿರೀಕ್ಷೆಯನ್ನು ಭಾರತೀಯ ಹವಾಮಾನ ಇಲಾಖೆ ಮುಂದಿಟ್ಟಿತ್ತು. ನಂತರ ಆ ದಿನಾಂಕವನ್ನು ಅನೇಕ ಬಾರಿ ಪರಿಷ್ಕರಿಸಿದೆ. ಹೀಗಾಗಿ ಹಂತ ಹಂತವಾಗಿ ವಿಳಂಬವಾಗುತ್ತಲೇ ಇದೆ.

ಭಾರತಕ್ಕೆ ಮುಂಗಾರು ಅತಿ ಅಗತ್ಯವೇಕೆ?

ನೈರುತ್ಯ ಮಾರುತವು ಭಾರತದ ಜೀವನಾಡಿಯಾಗಿದ್ದು, ಜೂನ್ ಮತ್ತು ಸೆಪ್ಟೆಂಬರ್ ನಡುವೆ ದೇಶದ ವಾರ್ಷಿಕ ಮಳೆಯ ಶೇ 70-80ರಷ್ಟು ನೀಡುತ್ತದೆ. ರೈತರು ಅಕ್ಕಿ, ದ್ವಿದಳ ಧಾನ್ಯಗಳು ಮತ್ತು ರಾಷ್ಟ್ರವನ್ನು ಪೋಷಿಸುವ ಇತರ ಅಗತ್ಯ ಬೆಳೆಗಳನ್ನು ಬಿತ್ತಲು ಮುಂಗಾರು ಮಳೆಯನ್ನೇ ಅವಲಂಬಿಸಿದ್ದಾರೆ. ನಗರಗಳ ಜಲಾಶಯ ತುಂಬಲು, ನೀರಿನ ಕೊರತೆ ನಿವಾರಿಸಲು ಮತ್ತು ತಾಪಮಾನ ಕಡಿಮೆ ಮಾಡಲು ಮುಂಗಾರು ಮಳೆಯನ್ನು ಅವಲಂಬಿಸಿದ್ದಾರೆ.

ಸಮಯಕ್ಕೆ ಸರಿಯಾಗಿ ಮುಂಗಾರು ಆಗಮಿಸಿದರೆ ಹಸಿರು ಹೊಲಗಳು, ತುಂಬಿದ ಸರೋವರಗಳು ಮತ್ತು ಸ್ಥಿರವಾದ ಆಹಾರ ಬೆಲೆಗಳು. ಆದರೆ ಮುಂಗಾರು ತಡವಾದಾಗ ಅಥವಾ ದುರ್ಬಲವಾದಾಗ ಪರಿಣಾಮಗಳು ದೈನಂದಿನ ಜೀವನದಲ್ಲಿ ಕಂಡುಬರುತ್ತವೆ. ದೀರ್ಘವಾಗುವ ಶಾಖದ ಅಲೆಗಳು, ಶುಷ್ಕ ಹವಾಮಾನಗಳು ಮತ್ತು ಕೃಷಿಯಿಂದ ವಿದ್ಯುತ್ ಸರಬರಾಜುವರೆಗೆ ಆರ್ಥಿಕ ಸ್ಥಿತಿಯ ಮೇಲೆ ಒತ್ತಡ ಬೀಳುತ್ತದೆ. ಆದರೆ ಮುಂಗಾರು ವಿಳಂಬವಾಗುವುದೇಕೆ? ಹವಾಮಾನ ತಜ್ಞರ ಪ್ರಕಾರ ಹಿಂದೂ ಮಹಾಸಾಗರದಲ್ಲಿರುವ ಅಸಹಜವಾದ ಶಾಂತಿ ನಿಧಾನಗತಿಯ ಮುಂಗಾರಿಗೆ ಕಾರಣವಾಗಿದೆ.

ಮುಂಗಾರು ವಿಳಂಬಕ್ಕೆ ಹಿಂದೂ ಮಹಾಸಾಗರ ಕಾರಣವೆ?

ಹಿಂದೂ ಮಹಾಸಾಗರ ಸಾಮಾನ್ಯವಾಗಿ ಮುಂಗಾರು ಹವಾಮಾನಕ್ಕೆ ಕಾರ್ಖಾನೆಯಂತೆ ವರ್ತಿಸುತ್ತದೆ. ಸಾಗರದ ಬೆಚ್ಚಗಿನ ನೀರು ಮಳೆ ಹೊಂದುವ ಮೋಡಗಳ ಸೃಷ್ಟಿ ಮತ್ತು ಸುತ್ತಮುತ್ತಲ ಪ್ರದೇಶಗಳಿಗಿಂತ ವಾತಾವರಣದ ಒತ್ತಡ ಕಡಿಮೆ ಇರುವ ಪ್ರದೇಶ (low-pressure systems) ಉತ್ತರದೆಡೆ ಭಾರತಕ್ಕೆ ಚಲಿಸಲು ಸಹಾಯ ಮಾಡುತ್ತದೆ.

ಆದರೆ ಪ್ರಸ್ತುತ ಈ ಕಾರ್ಖಾನೆ ನಿಷ್ಕ್ರಿಯವಾಗಿದೆ. ಉಪಗ್ರಹ ಚಿತ್ರಗಳು ಭಾರತದ ದಕ್ಷಿಣಕ್ಕೆ ವಿಶಾಲವಾಗಿ ವ್ಯಾಪಿಸಿರುವ ಸ್ಪಷ್ಟವಾದ ಆಕಾಶವನ್ನು ತೋರಿಸುತ್ತಿದೆ. ಕೆಲವೇ ಮೋಡಗಳು ಅಥವಾ ಮಳೆ ವ್ಯವಸ್ಥೆಗಳು ರೂಪುಗೊಳ್ಳುತ್ತಿವೆ. ಈ ಹೊಸ ವ್ಯವಸ್ಥೆಗಳು ಅಭಿವೃದ್ಧಿ ಹೊಂದಿ ಉತ್ತರದೆಡೆಗೆ ಮುಂದುವರಿಯದೆ ಮುಂಗಾರು ಮಾರುತಗಳು ದೇಶದೊಳಗೆ ನುಸುಳಲು ಪೂರ್ಣ ಬಲ ಪಡೆಯಲು ಸಾಧ್ಯವಾಗುತ್ತಿಲ್ಲ.

ಕೇರಳದಲ್ಲಿ ಮಳೆ ಇನ್ನೂ ಆರಂಭವಾಗದೆ ಇರುವುದನ್ನು ಈ ಸ್ಥಿತಿ ಸೂಚಿಸುತ್ತದೆ. ಮುಂಗಾರು ಪೂರ್ವ ಮಳೆಗಳು ಮಾತ್ರ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ಚಟುವಟಿಕೆಯ ಕೊರತೆಯು ಹವಾಮಾನ ಮಾದರಿಗಳಿಗೆ ಸಂಬಂಧಿಸಿದೆ. ಪೆಸಿಫಿಕ್ನಲ್ಲಿ ಬೆಳೆಯುತ್ತಿರುವ ಎಲ್ ನಿನೊ ಹೆಚ್ಚಾಗಿ ಗಾಳಿಯ ಹರಿವನ್ನು ಬದಲಿಸುವ ಮೂಲಕ ಮತ್ತು ಪ್ರದೇಶದಿಂದ ಮಳೆಯನ್ನು ಬೇರೆಡೆಗೆ ಬದಲಿಸುವ ಮೂಲಕ ಭಾರತದ ಮುಂಗಾರನ್ನು ದುರ್ಬಲಗೊಳಿಸುತ್ತಿದೆ. 2026ರ ನೈರುತ್ಯ ಮುಂಗಾರು ಸಾಮಾನ್ಯವಾಗಿ ಮಳೆಯ ಶೇ 90ರಷ್ಟನ್ನು ತರುತ್ತದೆ ಎಂದು ಐಎಂಡಿ ಈಗಾಗಲೇ ಮುನ್ಸೂಚನೆ ನೀಡಿದೆ. ಇದನ್ನು ಸಾಮಾನ್ಯಕ್ಕಿಂತ ಕಡಿಮೆ ಮಳೆ ಎಂದು ವರ್ಗೀಕರಿಸಲಾಗಿದೆ.

×
Ad

ಮುಂಗಾರು ಬರುವುದೇ ಅಥವಾ ಇಲ್ಲವೆ?

ಆದರೆ ಮುಂಗಾರು ಬರುವುದೇ ಇಲ್ಲ ಎಂದು ಅರ್ಥವಲ್ಲ. ಮುಂಬರುವ ದಿನಗಳಲ್ಲಿ ಮುಂಗಾರು ಆಗಮಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮಾದರಿಗಳು ಸೂಚಿಸಿವೆ. ಆದರೆ ಒಟ್ಟು ಚಿತ್ರಣ ಕಳವಳಕಾರಿಯಾಗಿರಬಹುದು. ಅಸಮವಾದ ಮಳೆಯಾಗಬಹುದು. ಕೆಲವು ಪ್ರದೇಶಗಳು ಸಾಮಾನ್ಯಕ್ಕಿಂತ ಕಡಿಮೆ ಮಳೆ ಸ್ವೀಕರಿಸಬಹುದು.

ಸದ್ಯದ ಮಟ್ಟಿಗೆ ಭಾರತದಲ್ಲಿ ಬೇಸಗೆ ಮುಂದುವರಿದಿದೆ.

ಕೃಪೆ: indiatoday.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News