ಕೆಲವರತ್ತ ಸೊಳ್ಳೆಗಳು ಹೆಚ್ಚು ಆಕರ್ಷಿತರಾಗುವುದೇಕೆ?
ಸಾಂದರ್ಭಿಕ ಚಿತ್ರ | Photo Credit : magnific.com
ಸೊಳ್ಳೆಗಳು ನಿರ್ದಿಷ್ಟ ವ್ಯಕ್ತಿಗಳಿಗೇ ಏಕೆ ಹೆಚ್ಚು ಕಚ್ಚುತ್ತದೆ ಎಂದು ವಿಜ್ಞಾನಿಗಳು ಬಹಳ ಹಿಂದಿನಿಮದಲೇ ಆಸಕ್ತರಾಗಿದ್ದರು. ಇದೀಗ ಸೊಳ್ಳೆಗಳು ನಿರ್ದಿಷ್ಟ ವ್ಯಕ್ತಿಗಳತ್ತ ಹೆಚ್ಚು ಆಕರ್ಷಿತರಾಗುವಂತೆ ಮಾಡುವ ರಾಸಾಯನಿಕ ಕಾಕ್ಟೈಲ್ ಅನ್ನು ಅರ್ಥಮಾಡಿಕೊಳ್ಳವಲ್ಲಿ ವಿಜ್ಞಾನಿಗಳು ಪ್ರಗತಿ ಸಾಧಿಸುತ್ತಿದ್ದಾರೆ. ವಿವಿಧ ಸಂವೇದನಾ ಸೂಚನೆಗಳು ಸೊಳ್ಳೆಗಳು ಒಬ್ಬ ವ್ಯಕ್ತಿಯ ಮೇಲೆ ಇನ್ನೊಬ್ಬರನ್ನು ಆರಿಸಿಕೊಳ್ಳಲು ಕಾರಣವಾಗಬಹುದು. ಮುಖ್ಯವಾಗಿ ನಮ್ಮ ದೇಹವು ನೀಡುವ ವಾಸನೆ ಮತ್ತು ಶಾಖ ಹಾಗೂ ಬಿಡುವ ಇಂಗಾಲದ ಡೈ ಆಕ್ಸೈಡ್ ಕಾರಣದಿಂದ ಸೊಳ್ಳೆಗಳು ಆಕರ್ಷಿತವಾಗುತ್ತವೆ! ಕಚ್ಚುವ ಸೊಳ್ಳೆಗಳಾದ ಹೆಣ್ಣು ಸೊಳ್ಳೆಗಳು ಸೂಕ್ಷ್ಮವಾಗಿ ಟ್ಯೂನ್ ಮಾಡಲಾದ ಗ್ರಾಹಕಗಳೊಂದಿಗೆ ಈ ಸಂಕೇತಗಳನ್ನು ಪತ್ತೆ ಮಾಡುತ್ತವೆ ಮತ್ತು ನಂತರ ಅದಕ್ಕೆ ಅನುಗುಣವಾಗಿ ತಮ್ಮ ಗುರಿಗಳನ್ನು ಆರಿಸಿಕೊಳ್ಳುತ್ತವೆ.
ಆದರೆ ಸೊಳ್ಳೆಗಳು ನಿರ್ದಿಷ್ಟ ರಕ್ತ ಪ್ರಕಾರಗಳನ್ನು ಬಯಸುತ್ತವೆ ಎಂಬ ಕಲ್ಪನೆಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದು ಅಧ್ಯಯನಕಾರರಾದ ಅಭಿಪ್ರಾಯಪಟ್ಟಿದ್ದಾರೆ. ಫ್ರಾನ್ಸ್ ನ ಇನ್ಸ್ಟಿಟ್ಯೂಟ್ ಆಫ್ ರಿಸರ್ಚ್ ಫಾರ್ ಡೆವಲಪ್ಮೆಂಟ್ನ ಫ್ರೆಡ್ರಿಕ್ ಸಿಮರ್ಡ್ ಅವರ ಪ್ರಕಾರ ವಾಸನೆ ಬಹಳ ಮುಖ್ಯವಾಗಿರುತ್ತದೆ. “ನಮ್ಮ ಮೈಕ್ರೋಬಯೋಟದಿಂದ ಉತ್ಪತ್ತಿಯಾಗುವ ಅಣುಗಳ ಸೂಪ್ ಸೊಳ್ಳೆಗಳಿಗೆ ಹೆಚ್ಚು ಆಕರ್ಷಕವಾಗಿದೆ. ಮಾನವರು 300ರಿಂದ 1000ವರೆಗೆ ವಿಭಿನ್ನ ವಾಸನೆಯ ಸಂಯುಕ್ತಗಳನ್ನು ಬಿಡುಗಡೆ ಮಾಡುತ್ತಾರೆ. ಆದರೆ ಸೊಳ್ಳೆಗಳು ಯಾವುದಕ್ಕೆ ಆಕರ್ಷಿತವಾಗುತ್ತವೆ ಎನ್ನುವುದನ್ನು ಈಗಷ್ಟೇ ಅರ್ಥಮಾಡಿಕೊಳ್ಳಲು ಆರಂಭಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.
ಇತ್ತೀಚೆಗಿನ ಅಧ್ಯಯನವೊಂದರಲ್ಲಿ ಸಂಶೋಧಕರು ಪ್ರಯೋಗಾಲಯದಲ್ಲಿ 42 ಮಹಿಳೆಯರ ಮೇಲೆ ಈಡಿಸ್ ಈಜಿಪ್ಟಿ ಸೊಳ್ಳೆಗಳನ್ನು ಬಿಡುಗಡೆ ಮಾಡಿದರು. ಸೊಳ್ಳೆಗಳು 27 ವಾಸನೆಯ ಸಂಯುಕ್ತಗಳನ್ನು ಪತ್ತೆ ಹಚ್ಚಿದವು. ಸೊಳ್ಳೆಗಳು ಹೆಚ್ಚು ಕಚ್ಚಲು ಇಷ್ಟಪಡುವ ಮಹಿಳೆಯರಲ್ಲಿ ಚರ್ಮದ ಎಣ್ಣೆಯಾದ ಸೆಬಮ್ ವಿಭಜನೆಯಿಂದ ಬರುವ ಸಂಯುಕ್ತ ಉತ್ಪತ್ತಿಯಾಗುತ್ತದೆ ಎಂದು ಕಂಡುಕೊಳ್ಳಲಾಗಿದೆ. ಅನೇಕ ಅಧ್ಯಯನಗಳ ಪ್ರಕಾರ ಬಿಯರ್ ಕುಡಿಯುವುದರಿಂದ ದೇಹದ ಉಷ್ಣತೆ ಹೆಚ್ಚಾಗುವುದು, ಹೊರಹಾಕುವ ಇಂಗಾಲದ ಡೈ ಆಕ್ಸೈಡ್ ಪ್ರಮಾಣವನ್ನು ಹೆಚ್ಚಿಸುವುದು ಮತ್ತು ಚರ್ಮದ ವಾಸನೆ ಬದಲಾಯಿಸುವ ಕಾರಣ ಸೊಳ್ಳೆಗಳು ಹೆಚ್ಚು ಆಕರ್ಷಿತವಾಗುತ್ತವೆ.
2023ರಲ್ಲಿ ನೆದರ್ಲ್ಯಾಂಡ್ ನಲ್ಲಿ ನಡೆದ ಅಧ್ಯಯನದಲ್ಲಿ 465 ಸ್ವಯಂ ಸೇವಕರು ತಮ್ಮ ತೋಳುಗಳನ್ನು ಮಲೇರಿಯ ಹರಡಬಹುದಾದ ಹೆಣ್ಣು ಅನಾಫಿಲಿಸ್ ಸೊಳ್ಳೆಗಳಿಂದ ತುಂಬಿದ ಪಂಜರಗಳಲ್ಲಿ ಇರಿಸಿದ್ದರು. ಅವರಲ್ಲಿ 24 ಗಂಟೆಗಳೊಳಗೆ ಬಿಯರ್ ಕುಡಿದ ಸ್ವಯಂಸೇವಕರತ್ತ ಸೊಳ್ಳೆಗಳು 1.35 ಪಟ್ಟು ಹೆಚ್ಚು ಆಕರ್ಷಿತರಾಗಿದ್ದವು.