ನೀರು ಪಾಲಾದ ಯುವಕರಿಬ್ಬರ ಕುಟುಂಬಕ್ಕೆ ಸರಕಾರದಿಂದ ಸಿಗುವ ಅಗತ್ಯ ಪರಿಹಾರ ಕಲ್ಪಿಸಲಾಗುವುದು : ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು
ಯಾದಗಿರಿ: ಭೀಮಾ ನದಿಯಲ್ಲಿ ನೀರು ಪಾಲಾದ ಯುವಕರಿಬ್ಬರ ಕುಟುಂಬಕ್ಕೆ ಸರಕಾರದಿಂದ ಸಿಗುವ ಅಗತ್ಯ ಪರಿಹಾರ ಕಲ್ಪಿಸಲಾಗುತ್ತದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಹೇಳಿದ್ದಾರೆ.
ಅವರು ಜಿಲ್ಲೆಯ ವಡಗೇರಾ ತಾಲೂಕಿನ ಮಾಚನೂರು ಗ್ರಾಮದ ಭೀಮಾನದಿಯಲ್ಲಿ ಶುಕ್ರವಾರ ಪರಶುರಾಮ ನಾಟೇಕರ್ ಹಾಗೂ ಸಿದ್ದಪ್ಪ ನೀರು ಪಾಲಾದ ಘಟನೆ ಹಿನ್ನಲೆ ಇಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಮಾಚನೂರು ಗ್ರಾಮದ ಭೀಮಾನದಿ ತೀರಕ್ಕೆ ಆಗಮಿಸಿ ಘಟನೆ ನಡೆದ ಸ್ಥಳ ಪರಿಶೀಲನೆ ಮಾಡಿದರು.
ಅಗ್ನಿಶಾಮಕ ದಳ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ( ಎಸ್ ಡಿಆರ್ ಎಫ್ ) ತಂಡದಿಂದ ಮೃತ ದೇಹ ಶೋಧ ಕಾರ್ಯಾಚರಣೆ ಬಗ್ಗೆ ಅಗತ್ಯ ಮಾಹಿತಿಯನ್ನು ಪಡೆದರು.ಈ ವೇಳೆ ತಹಶೀಲ್ದಾರ್ ಮಂಗಳಾ ಹಾಗೂ ಸಿಪಿಐ ಸುನೀಲ್ ಮೂಲಿಮನಿ ಅವರು ಘಟನೆ ನಡೆದ ಬಗ್ಗೆ ಮಾಹಿತಿ ನೀಡಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ರಮೇಶ್ ಕೋಲಾರ, ತಹಶೀಲ್ದಾರ್ ಮಂಗಳಾ ಎಮ್., ಡಿವೈಎಸ್ಪಿ ಅರುಣಕುಮಾರ್ ಪಿ. ಕೊಳ್ಳುರು, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ತಾಪಂ ಇಓ ಮಲ್ಲಿಕಾರ್ಜುನ ಸಂಗ್ವಾರ ಸಿಪಿಐ ಸುನೀಲ್ ಮೂಲಿಮನಿ, ಪಿಎಸ್ ಐ ಮಹೆಬೂಬ್ ಅಲಿ, ಎಸ್ ಡಿಆರ್ ಎಫ್ ಆರ್ ಪಿಐ ಅಮರೀಶ್ ಚವ್ಣಾಣ, ಅಗ್ನಿಶಾಮಕ ದಳ ಅಧಿಕಾರಿ ಮನೋಹರ್ ರಾಠೋಡ, ಮುಖಂಡರಾದ ವೀರುಪಾಕ್ಷಪ್ಪಗೌಡ ಮಾಚನೂರು, ಮರೇಪ್ಪ ಬಿಳ್ಹಾರ, ವಿಶ್ವನಾಥರೆಡ್ಡಿ ಮಾಚನೂರು,ಮಲ್ಲಣ್ಣ ಗೌಡ ಗೌಡರೆಡ್ಡಿ, ಸಿದ್ದಣ್ಣಗೌಡ ಕಾಡಂನೋರ್, ಬಾಷುಮೀಯಾ, ಬಸವರಾಜ ಪಾಟೀಲ, ಸೇರಿದಂತೆ ಅನೇಕರು ಇದ್ದರು.