ಏರ್ ಇಂಡಿಯಾ ವಿಮಾನ ಪತನ | ಪ್ರಧಾನಿ ಮೋದಿ ರಾಜಿನಾಮೆ ನೀಡಲಿ ಎಂದ ಸಚಿವ ಶರಣಬಸಪ್ಪ ದರ್ಶನಾಪುರ
Update: 2025-06-13 21:02 IST
ಯಾದಗಿರಿ: ಅಹಮದಾಬಾದ್ ನಲ್ಲಿ ವಿಮಾನ ಪತನಗೊಂಡು ಅತಿದೊಡ್ಡ ದುರಂತ ಸಂಭವಿಸಿದೆ. ಈಗಾಗಲೇ ಇದರ ಬಗ್ಗೆ ವಿಶ್ಲೇಷಣೆಗಳಾಗಿವೆ. ಈ ಪ್ರಕರಣ ಸಂಬಂಧ ಪ್ರಧಾನಿ ಮೋದಿ ಹಾಗೂ ಸಂಬಂಧಪಟ್ಟ ಸಚಿವರು ರಾಜೀನಾಮೆ ನೀಡಬೇಕು ಎಂದು ಯಾದಗಿರಿಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪೂರ ಹೇಳಿದ್ದಾರೆ.
ಅಂದು ರೈಲು ದುರಂತ ಸಂಭವಿಸಿದಾಗ ಲಾಲ್ ಬಹದ್ದೂರ್ ಶಾಸ್ತ್ರಿ ರಾಜಿನಾಮೆ ನೀಡಿದ್ದರು. ಇವರು ಕೂಡ ರಾಜಿನಾಮೆ ನೀಡಲಿ ಎಂದು ಪ್ರತಿಕ್ರಿಯಿಸಿದರು.