ಸುರಪುರ: ಕರ್ನಾಟಕ ಉರ್ದು ಅಕಾಡೆಮಿ ವತಿಯಿಂದ ಹಿರಿಯ ಪತ್ರಕರ್ತ ಗಿರೀಶ್ ಶಾಬಾದಿಗೆ ಸನ್ಮಾನಿಸಿ ಗೌರವಿಸಲಾಯಿತು.

ಪಟ್ಟಣದ ಪತ್ರಿಕಾ ಭವನದಲ್ಲಿ ಅಕಾಡೆಮಿಯ ಅನೇಕ ಮುಖಂಡರು ಆಗಮಿಸಿ ಗಿರೀಶ್ ಶಾಬಾದಿಗೆ ಸನ್ಮಾನಿಸಿ ಪತ್ರಿಕಾ ರಂಗದಲ್ಲಿನ ಕಳೆದ ಎರಡುವರೆ ದಶಕಗಳ ಸೇವೆಯ ಕುರಿತು ಪ್ರಶಂಸಾ ಫಲಕ ನೀಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಅಕಾಡೆಮಿಯ ತೌಫಿಕ್ ಆಸಾದ್, ಸಲೀಂ ಮನ್ಸೂರ್, ಔಸಫ್ ಮುಜಾಹಿದ್ ಮಜಾಹರ್, ಕಲೀಂ ಫರೀದಿ ಹಾಗೂ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸೂಗೂರೇಶ ವಾರದ, ಉಪಾಧ್ಯಕ್ಷ ಸೋಮರಾಯ ಶಖಾಪುರ, ಶ್ರೀರಂಗು ಮಿರಿಯಾಲ್, ಗೋವಿಂದರಾಜ ಶಹಾಪೂರಕರ್, ಸಿದ್ದಯ್ಯ ಮಠ, ಶರಣಗೌಡ ಪಾಟೀಲ್, ಪ್ರಕಾಶ ಅಲಬನೂರ, ಅಮರೇಶ ಬಿ.ಕುಂಬಾರ, ದಿಲೀಪ್ ಯಾದವ್, ಹರೀಶ್ ತ್ರಿವೇದಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor