ವಡಿಗೇರಾ | ಕಸ್ತೂರಬಾ ಗಾಂಧಿ ಬಾಲಕಿಯರ ಶಾಲೆಗೆ-ಸಿಇಓ ಲವೀಶ್ ಓರಡಿಯಾ ಭೇಟಿ

ಶಿಕ್ಷಣ ಗುಣಮಟ್ಟ, ಮೂಲಸೌಕರ್ಯ ಹಾಗೂ, ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

Update: 2026-07-24 16:49 IST

ವಡಿಗೇರಾ: ತಾಲೂಕಿನ ವಡಿಗೇರಾ (ಹೆಚ್) ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಓರಡಿಯಾ ಭೇಟಿ ನೀಡಿ ಶಿಕ್ಷಣದ ಗುಣಮಟ್ಟ, ಮೂಲಸೌಕರ್ಯ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.

ಶಾಲೆಯಲ್ಲಿ ಬೋಧನಾ ವ್ಯವಸ್ಥೆ, ಶಿಕ್ಷಣದ ಗುಣಮಟ್ಟ, ಗಣಕಯಂತ್ರ ಆಧಾರಿತ ಕಲಿಕೆ, ಸೆನ್ಸರ್ ಆಧಾರಿತ ಸ್ಟೆಮ್ (STEM) ಮಾದರಿಗಳು, 10ನೇ ತರಗತಿ ಫಲಿತಾಂಶ ಸುಧಾರಣೆಗೆ ಕೈಗೊಂಡಿರುವ ಕ್ರಮಗಳು, ಟ್ಯಾಬ್‌ಗಳ ಬಳಕೆ ಹಾಗೂ ಡಿಜಿಟಲ್ ಕಲಿಕಾ ವಿಷಯಗಳ ಕುರಿತು ಮಾಹಿತಿ ಪಡೆದು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಬಳಿಕ ಶಾಲೆಯ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿದ ಅವರು, ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಶೌಚಾಲಯ ಕಾಮಗಾರಿಯ ಗುಣಮಟ್ಟ ವೀಕ್ಷಿಸಿ, ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಟಾಟಾ ಕಲಿಕಾ ಟ್ರಸ್ಟ್ ಸಹಯೋಗದಲ್ಲಿ ಹಾಲಗೇರಾ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಮಹಿಳಾ ಸ್ವಸಹಾಯ ಸಂಘಗಳ ಕಿರು ಆಹಾರ ಸಂಸ್ಕರಣಾ ಘಟಕ ಹಾಗೂ ಬಯೋಗ್ಯಾಸ್ ಘಟಕಕ್ಕೆ ಭೇಟಿ ನೀಡಿ, ಅವುಗಳ ಕಾರ್ಯವೈಖರಿ ಮತ್ತು ಉಪಯೋಗದ ಕುರಿತು ಮಾಹಿತಿ ಪಡೆದರು.

ಇದೇ ವೇಳೆ ಬೆಂಡೆಬೆಂಬಳಿ ವ್ಯಾಪ್ತಿಯ ಕದ್ರಾಪುರ ಗ್ರಾಮದಲ್ಲಿ ಟಾಟಾ ಕಲಿಕಾ ಟ್ರಸ್ಟ್ ನಿರ್ಮಿಸಿರುವ ಸೌರಶಕ್ತಿ (ಸೋಲಾರ್) ಆಧಾರಿತ ನೀರಾವರಿ ವ್ಯವಸ್ಥೆ, ಸಸಿ ನೆಡುವಿಕೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ರೈತರು ಇಂತಹ ನವೀನ ಯೋಜನೆಗಳ ಸದುಪಯೋಗ ಪಡೆದು ಕೃಷಿ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ವೇಳೆ ತಾಪಂ ಇಓ ಶ್ರೀ ಶಶಿಧರ ಹಿರೇಮಠ, ಎಡಿ ಕಿರಾಣ ಬಾಬು, ತೋಟಗಾರಿಕೆ ಇಲಾಖೆ, ಟಾಟಾ ಕಲಿಕಾ ಟ್ರಸ್ಟ್ ಯೋಜನಾ ಅಧಿಕಾರಿಗಳು, ಎನ್ ಆರ್ ಎಲ್ ಎಮ್ ಅಧಿಕಾರಿಗಳು, ಪಿಡಿಓ, ಟಿಸಿ ಹಾಗೂ ಜಿಪಂ, ತಾಪಂ ಅಧಿಕಾರಿಗಳು, ಇತರ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News