×
Ad

ಯಾದಗಿರಿ | ಯುಪಿಎಸ್ಸಿ ಸಾಧಕ ಸಂದೀಪ್ ಬಾಡದ್‌ಗೆ ಸನ್ಮಾನ

Update: 2026-03-10 23:32 IST

ಯಾದಗಿರಿ: ನಾಗರಿಕ ಸೇವಾ ಪರೀಕ್ಷೆಯಾದ UPSC ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಜಿಲ್ಲೆಯ ಹೆಮ್ಮೆ ಹೆಚ್ಚಿಸಿದ ಸಂದೀಪ್ ಬಡಾದ್ ಅವರನ್ನು ಬಿಜೆಪಿ ಹಿರಿಯ ಮುಖಂಡ ರಾಚನ್ನಗೌಡ ಮುದ್ನಾಳ್ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಚಣ್ಣಗೌಡ ಮುದ್ನಾಳ ಅವರು, ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಂದೀಪ್ ಬಾಡದ್ ಅಪಾರ ಪರಿಶ್ರಮದಿಂದ ಅಧ್ಯಯನ ಮಾಡಿದ್ದಾರೆ. ಅವರ ಸಾಧನೆಯಿಂದ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಇಂತಹ ಸಾಧಕರನ್ನು ನೋಡಿ ಜಿಲ್ಲೆಯ ಯುವಕರು ಪ್ರೇರಣೆ ಪಡೆದು ಮುಂದಕ್ಕೆ ಬರಬೇಕು ಎಂದು ಹೇಳಿದರು.

ಯಾದಗಿರಿ ಜಿಲ್ಲೆಯನ್ನು ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂದು ಹೇಳಲಾಗುತ್ತದೆ. ಆದರೆ ಸಂದೀಪ್ ಬಾಡದ್ ಅವರಂತಹ ಪ್ರತಿಭೆಗಳು ಆ ಮಾತು ತಪ್ಪು ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಜಿಲ್ಲೆಯ ಯುವಕರಿಗೆ ಅವರು ಮಾದರಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಭೀಮಣ್ಣಗೌಡ ಕ್ಯಾತನಾಳ, ಡಾ.ಸುಪುತ್ರರೆಡ್ಡಿ, ವೆಂಕಟರಡ್ಡಿ ತಂಗಡಗಿ, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News