×
Ad

ಯಾದಗಿರಿ | 85 ಲಕ್ಷ ರೂ. ವೆಚ್ಚದ 5 ಶಾಲಾ ಕೋಣೆ, ಕಾಂಪೌಂಡ್ ಕಾಮಗಾರಿಗೆ ಶಾಸಕ ತುನ್ನೂರು ಚಾಲನೆ

Update: 2025-01-18 15:47 IST

ಯಾದಗಿರಿ : ಶಿಕ್ಷಣದಿಂದಲೇ ಮಕ್ಕಳ ಸರ್ವಾಂಗಿಣ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಸರಕಾರ ಸಾಕಷ್ಟು ಸೌಲಭ್ಯಗಳು ನೀಡಿದೆ, ಅದರ ಲಾಭ ಪಡೆದು ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಹೇಳಿದರು.

ಶನಿವಾರ ವಾರ್ಡ ನಂ.18 ರ ಡಾ.ಅಂಬೇಡ್ಕರ್ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸ ಐದು ಕೋಣೆಗಳು ಹಾಗೂ ಕಂಪೌಂಡ್ ಗೋಡೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಮಾಡಿ ಮಾತಾನಾಡಿದ ಅವರು, ಕೆಕೆಆರ್ ಡಿಬಿ ಅನುದಾನದಡಿ 85 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಈ ಕಾಮಗಾರಿ ಗುಣಮಟ್ಟದಲ್ಲಿ ಮತ್ತು ನಿಗದಿತ ಸಮಯದಲ್ಲಿ ಮುಗಿಸಬೇಕೆಂದು ಹೇಳಿದರು. ಒಟ್ಟಾರೆ 1.10 ಕೋಟಿ ರೂ.ಖರ್ಚು ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ಬಸಮ್ಮ ಕುರಕುಂಬಳಕರ್, ಎಸ್ ಡಿ ಎಂಸಿ ಅಧ್ಯಕ್ಷ ಅಂಬರೀಶ ಚಟ್ಟೇರಕರ್, ನಗರಸಭೆ ಸದಸ್ಯ ಹಣಮಂತ ನಾಯಕ, ಮಲ್ಲಿಕಾರ್ಜುನ ಈಟೇ, ಲಕ್ಷ್ಮಾರೆಡ್ಡಿ, ಪ್ರಶಾಂತ, ಮಲ್ಲಯ್ಯ ಈಟೇ, ಭೀಮಣ್ಣ ಕಾಗಿ, ಶರಣು ನಾಟೇಕಾರ, ಪರಶುರಾಮ ಒಡೆಯರ್, ಎಂಜಿನಿಯರ್ ನಾಗೇಶ, ಮುಖ್ಯ ಗುರುಗಳಾದ ವಿಜಯಲಕ್ಷ್ಮಿ, ವೆಂಕಟರಡ್ಡಿ, ಮಹೇಶ ಕುರಕುಂಬಳಕರ್, ಮಲ್ಲಿಕಾರ್ಜುನ ಪೂಜಾರಿ ಸೇರಿದಂತೆಯೇ ಇತರರಿದ್ದರು. ಬಿಆರ್ ಸಿ ವೆಂಕಟರಡ್ಡಿ ನಿರೂಪಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News