×
Ad

ಯಾದಗಿರಿ | ವಿಶೇಷ ಚೇತನ ಮಕ್ಕಳ, ವಯಸ್ಕರ ಆರೋಗ್ಯ ಮೇಳ ಯಶಸ್ವಿ

Update: 2025-02-15 17:20 IST

ಯಾದಗಿರಿ : ಕೋಟಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿ ಅಸೋಶಿಯೇಷನ್ ಪೀಪಲ್ ವೀಥ್ ಡಿಸೆಬಲಿಟಿ (ಎಪಿಡಿ) ವತಿಯಿಂದ ವಿಶೇಷ ಚೇತನ ಮಕ್ಕಳ ಹಾಗೂ ವಯಸ್ಕರ ಆರೋಗ್ಯ ಮೇಳ ಯಶಸ್ವಿಯಾಗಿ ನಡೆಯಿತು.

ಶಿಬಿರವನ್ನು ಯಾದಗಿರಿ ತಾಲೂಕಿನ ಸಂಯೋಜಕರಾದ ರಮೇಶ ಕಟ್ಟಿಮನಿ ಉದ್ಘಾಟಿಸಿದರು.

ಈ ಆರೋಗ್ಯ ಮೇಳ ಕುರಿತು ವೈಧ್ಯಾಧಿಕಾರಿಯವರಾದ ಮಲ್ಲಿಯನಾಜ್ ಮಾತನಾಡಿ, ಎಪಿಡಿ ಸಂಸ್ಥೆಯವರು ಈ ಕಾರ್ಯಕ್ರಮ ಆಯೋಜಿಸಿದ್ದು, ಸಂತಸದ ವಿಷಯ ನೀವೆಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಸಿ.ಹೆಚ್.ಓ. ಶರಣಬಸ್ಸಮ್ಮ ಕಾವೇರಿ ಮಾತನಾಡಿ, ಎಪಿಡಿ ಸಂಸ್ಥೆಯು ವಿಕಲಚೇತನರಿಗೆ ಸಾಧನೆ ಸಲಕರಣೆಗಳನ್ನು ನೀಡಿ ಮತ್ತು ಇಂತಹ ಒಳ್ಳೆಯ ಆರೋಗ್ಯ ಮೇಳವನ್ನು ಮಾಡಿ ಜನರಿಗೆ ತುಂಬಾ ಅನುಕೂಲ ಮಾಡುತ್ತಿದ್ದಾರೆ ಇದರ ಉಪಯೋಗ ತೆಗೆದುಕೊಳ್ಳಬೇಕು ಎಂದು ತಿಳಿಸಿ ಎಪಿಡಿ ಸಂಸ್ಥೆಯವರಿಗೆ ಧನ್ಯವಾದ ತಿಳಿಸಿದರು.

ಈ ಸಂದರ್ಭದಲ್ಲಿ ಪಿ.ಹೆಚ್.ಸಿ.ಓ.ಶೋಭಾರಾಣಿ, ವೆಂಕಟೇಶ ಎಫ್.ಡಿ.ಎ, ಲ್ಯಾಬ್ ಟೇಕ್ ನೀಷಿಯನ್ ಚಂದ್ರಕಲಾ, ಆಶಾ ಕಾರ್ಯಕರ್ತರಾದ ಭೀಮಲಿಂಗಮ್ಮ ಮಹಾಲಕ್ಷ್ಮೀ ಗೌರಮ್ಮ ಆರತಿ ಇಂದಿರಮ್ಮ, ಹಾಗೂ ಪಿಜಿಯೋತೇರಪಿಷ್ಟ ಪ್ರೀಯಾದರ್ಶನ, ಸಿಬಿಆರ್ ಮಲ್ಲಿಕಾರ್ಜುನ ಶೀಲ್ಪಾ ವಿ.ಆರ್.ಡಬ್ಲ್ಯೂ ಮರೇಪ್ಪ, ಪೇಲ್ಲೊ ಬಸವರಾಜ ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News