ಯಾದಗಿರಿ | ಕಲಬೆರಕೆ ಪೆಟ್ರೋಲ್ ಮಾರಟ ಆರೋಪ : ಬೈಕ್ ಸವಾರರ ಪರದಾಟ
ಯಾದಗಿರಿ : ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಕಲಬೆರಕೆ ಪೆಟ್ರೋಲ್ ಮತ್ತು ಡಿಸೇಲ್ ಮಾರಾಟ ದಂಧೆ ನಡೆಯುತ್ತಿರುವ ಆರೋಪ ಕೇಳಿಬಂದಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪಾನ್ ಶಾಫ್, ಕಿರಾಣಿ ಅಂಗಡಿ, ಸೇರಿದಂತೆ ಸಣ್ಣಪುಟ್ಟ ಅಂಗಡಿಗಳಲ್ಲಿ ಕಲಬೆರಕೆ ಪೆಟ್ರೋಲ್ ಮಾರಾಟ ಮಾಡುತ್ತಿದ್ದು, ಕೆಲ ಅಂಗಡಿ ಮಾಲಕರು ತಮ್ಮ ಲಾಭದಾಯಕ ಆಸೆಗಾಗಿ ವಾಹನ ಸವಾರರ ಜೊತೆಗೆ ಆಟವಾಡುತ್ತಿದ್ದಾರೆ ಎನ್ನುವ ಆರೋಪ ಸದ್ಯ ಕೇಳಿ ಬರುತ್ತಿದೆ.
ಈ ರೀತಿ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಕಲಬೆರಕೆ ಪೆಟ್ರೋಲ್ ಹಾಕಿಸಿದ ಪರಿಣಾಮವಾಗಿ ಬೈಕ್ ಗಳು ನಡುದಾರಿಯಲ್ಲಿ ಕೈ ಕೊಟ್ಟಿರುವುದರಿಂದ ಸವಾರರು ಬೈಕ್ ರಿಪೇರಿಗೆ ಎಂದು ಗ್ಯಾರೇಜ್ ಗೆ ತೋರಿಸಲು ಬಂದ ಮೇಲೆ ಈ ದಂಧೆಯ ಜಾಲ ಪತ್ತೆಯಾಗಿದೆ.
ಇದರಿಂದಾಗಿ ಹಳ್ಳಿಯ ಜನರು ಸಾವಿರಾರು ರೂ. ಖರ್ಚು ಮಾಡಬೇಕಾದ ದುಸ್ಥಿತಿ ಎದುರಾಗಿದೆ. ಸಣ್ಣಸಣ್ಣ ಬಾಟಲ್ಗಳಲ್ಲಿ ಪೆಟ್ರೋಲ್, ಡೀಸೆಲ್ ತುಂಬಿ ಅಂಗಡಿಗಳಲ್ಲಿ 60-120 ರೂ. ಗಳಿಗೆ ಮಾರಾಟ ಮಾಡುತ್ತಿದ್ದಾರೆ ಇದನ್ನು ನೋಡಿದ ಹಳ್ಳಿಯ ಜನರು ಅನಿವಾರ್ಯ ಸಂದರ್ಭದಲ್ಲಿ ಪೆಟ್ರೋಲ್ ಹಾರಿಸಿಕೊಂಡು ಹೋಗಿ ಮೋಸಕ್ಕೆ ಒಳಗಾಗುತ್ತಿದ್ದಾರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕೊಂಡು ಅಕ್ರಮವಾಗಿ ಪೆಟ್ರೋಲ್, ಡೀಸೆಲ್ ಮಾರಾಟ ಮಾಡುತ್ತಿರುವ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.