ಯಾದಗಿರಿ | ಜ.30 ರಂದು ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ : ರಾಜಾ ಮುಕುಂದ ನಾಯಕ
ಯಾದಗಿರಿ/ ಸುರಪುರ : ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಗರುಡಾದ್ರಿ ಕಲಾ ಮಂದಿರದಲ್ಲಿ ಜ.30 ರಂದು ಸಂಜೆ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ ಎಂದು ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷರು ಹಾಗೂ ಆಳ್ವಾಸ್ ನುಡಿಸಿರಿ ಘಟಕದ ಅಧ್ಯಕ್ಷ ರಾಜಾ ಮುಕುಂದ ನಾಯಕ ತಿಳಿಸಿದರು.
ಕ್ಲಬ್ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಐದು ವರ್ಷಗಳ ಹಿಂದೆ ಮಾಜಿ ಸಚಿವರಾದ ರಾಜಾ ಮದನಗೋಪಾಲ ನಾಯಕ ಅವರು ಇದೇ ಕಾರ್ಯಕ್ರಮವನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿದ್ದರು. ಅವರ ಪ್ರೇರಣೆಯಲ್ಲಿ ಜ.30 ರಂದು ಕಾರ್ಯಕ್ರಮ ನಡೆಯಲಿದ್ದು, ಜನ ಕಲಾವಿದರು ಭಾಗವಹಿಸಲಿದ್ದು, ಉತ್ತರ ಕರ್ನಾಟಕದ ವಿಶೇಷ ಕಲಾ ಪ್ರಕಾರಗಳು ನೋಡಲು ಸಿಗಲಿವೆ ಎಂದರು.
ಎಲ್ಲಾ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಆಳ್ವಾಸ್ ಪ್ರತಿಷ್ಠಾನದ ಸಂಚಾಲಕರಾದ ಅಂಬರೀಶ್ ಚಿಂಪ್ಲೂಕರ್ ಮಾತನಾಡಿ, ಸುರಪೂರಕ್ಕೂ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಕ್ಕೂ ವಿಶೇಷ ನಂಟಿದೆ ಎಂದರು.
ಸಭೆಯಲ್ಲಿ ಆಕಾಶನಾಣಿಯ ನಿವೃತ್ತ ಕಾರ್ಯಕ್ರಮ ನಿರ್ವಹಣಾಧಿಕಾರಿ ಸದಾನಂದ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆ ಸಂಚಾಲಕ ಧಮೇಂದ್ರ ಕುದ್ರೋಳಿ,ರಾಜಾ ಹರ್ಷವರ್ಧನ ನಾಯಕ,ಕಿಶೋರಚಂದ್ ಜೈನ್, ಪ್ರಕಾಶ ಸಜ್ಜನ್, ಮಹೇಶ ಜಾಗೀರದಾರ, ಬಸವರಾಜ ಜಮದ್ರಖಾನಿ, ಸೋಮರಾಯ ಶಖಾಪುರ, ಶ್ರೀನಿವಾಸ ಜಾಲವಾದಿ, ಅಮರೇಶ ಕುಂಬಾರ,ಕಮಲಾಕರ, ಚನ್ನಬಸಪ್ಪ ಹೂಗಾರ, ಲಕ್ಷ್ಮಣ ಗುತ್ತೇದಾರ, ನಬಿಲಾಲ ಮಕಾಂದಾರ್, ಸೋಮರಡ್ಡಿ ಮಾನಸಗಲ್, ಶ್ರೀಶೈಲ ಯಂಕಂಚಿ, ಹೆಚ್.ರಾಠೋಡ್, ಮಹದೇವಪ್ಪ ಗುತ್ತೇದಾರ, ಶರಣಗೌಡ ಪಾಟೀಲ್, ರಾಘವೇಂದ್ರ ಭಕ್ರಿ, ಭೀಮನಗೌಡ,ಅಮರನಾಥ ಸೇರಿದಂತೆ ಅನೇಕರು ಭಾಗವಹಿಸಿದ್ದರು.