ಯಾದಗಿರಿ | ಅಂಬಿಗರ ಚೌಡಯ್ಯ ಸಂದೇಶ ಪಾಲಿಸಿ ಮಕ್ಕಳಿಗೆ ಉನ್ನತ ಶಿಕ್ಷಣ, ಸಂಸ್ಕಾರ ನೀಡಿ : ಉಮೇಶ ಕೆ.ಮುದ್ನಾಳ
ಯಾದಗಿರಿ : ಅರಿವೇ ತನಗೆ ಗುರು ಎಂದು ಹೇಳಿದ ನಿಜಶರಣ ಅಂಬಿಗರ ಚೌಡಯ್ಯನವರ ಸಂದೇಶ ವಚನಗಳನ್ನು ಪಾಲನೆಯನ್ನು ಪ್ರತಿಯೊಬ್ಬ ಸಮಾಜದವರು ಮಾಡಬೇಕು ಎಂದು ಕರ್ನಾಟಕ ಪ್ರದೇಶ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಹೇಳಿದರು.
ಗುರುಮಠಕಲ್ ಸಮೀಪಿನ ಸೇಡಂ ತಾಲ್ಲೂಕಿನ ಮೋತ್ಕಪಲ್ಲಿ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಸಂಘದ ವತಿಯಿಂದ ಜನವರಿ 21 ರಂದು ರಾಜ್ಯ ಸರಕಾರದ ಜಯಂತ್ಯೋತ್ಸವ ಅಂಗವಾಗಿ ಗುರುವಾರ ಚೌಡಯ್ಯನವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸಮಾಜ ಬಾಂಧವರು ಮೂಡನಂಬಿಕೆಗಳಿಂದ ದೂರವಿರಬೇಕು. ಯುವಕರು ದುಶ್ಚಟಗಳಿಗೆ ಬಲಿಯಾಗದೆ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಟ್ಟು ಸಮಾಜದ ಮುಖ್ಯವಾಹಿನಿಗೆ ಬರಲು ಎಲ್ಲರೂ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.
ಈ ವೇಳೆ ಮಲ್ಲೇಶ, ಭೀಮಶಪ್ಪ, ವೆಂಕಟಪ್ಪ, ಲಚ್ಚಮ್ಮ, ಶಾಮತಪ್ಪ, ವೆಂಕಟಪ್ಪ ಗೋರ್, ಭೀಮಶಪ್ಪ, ರಾಜಪ್ಪ, ಶ್ರೀನಿವಾಸ, ರವಿ, ಶಿವುಕುಮಾರ, ರಾಘವೇಂದ್ರ, ಸಂತೋಷ, ಕುಣಿಕೆಪ್ಪ, ಬಿಚಪ್ಪ ಹಾಗೂ ವಿಠಲ ಹೇರೂರು ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮದ ಮುಖಂಡರು ಇದ್ದರು.