×
Ad

ಯಾದಗಿರಿ | ಕೇಂದ್ರದಿಂದ ಜನವಿರೋಧಿ ಬಜೆಟ್ ಮಂಡನೆ : ಡಾ.ಭೀಮಣ್ಣ ಮೇಟಿ

Update: 2025-02-01 19:29 IST

ಯಾದಗಿರಿ : ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಜನವಿರೋಧಿ ಬಜೆಟ್ ಆಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಭೀಮಣ್ಣ ಮೇಟಿ ಆರೋಪಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಡ ಹಾಗೂ ಮಧ್ಯಮ ವರ್ಗದವರನ್ನು ಮುಖ್ಯವಾಹಿನಿಗೆ ತರಲು ಯಾವುದೇ ಯೋಜನೆಗಳನ್ನು ಘೋಷಣೆ ಮಾಡಿಲ್ಲ. ಇದೊಂದು ಉದ್ಯಮಿಗಳ ಪರವಾದ ಬಜೆಟ್ ಆಗಿದೆ ಎಂದು ದೂರಿದರು.

ದೇಶದಲ್ಲಿ ಯಾದಗಿರಿ ಜಿಲ್ಲೆ ಸೇರಿದಂತೆ 117 ಮಹತ್ವಾಕಾಂಕ್ಷೆ ಜಿಲ್ಲೆಗಳನ್ನು ಕೇಂದ್ರ ಸರಕಾರವೇ ಹಲವು ವರ್ಷಗಳಿಂದ ಘೋಷಣೆ ಮಾಡಿದೆ. ಆದರೆ ಈ ಹಿಂದುಳಿದ ಜಿಲ್ಲೆಗಳ ಪ್ರಗತಿಗೆ ಯಾವುದೇ ರೀತಿಯಿಂದ ಅನುದಾನ ಮೀಸಲು ಇಟ್ಟಿಲ್ಲ ಎಂದು ದೂರಿದರು.

ರೈತರನ್ನು ಸ್ವಾವಲಂಬಿಯನ್ನಾಗಿ ಮಾಡಲು ಬಜೆಟ್ನಲ್ಲಿ ಘೋಷಣೆ ಮಾಡಿಲ್ಲ. ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಮುಂದಿನ ದಿನಗಳಲ್ಲಿ ಅನ್ನದಾತರು ಕೇಂದ್ರ ಸರಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲಿದ್ದಾರೆ ಎಂದು ಹೇಳಿದರು.

ಇದೊಂದು ಪ್ರಚಾರಕ್ಕಾಗಿ ಮಂಡಿಸಿರುವ ಬಜೆಟ್ ಆಗಿದೆ. ಯಾವುದೇ ಅಭಿವೃದ್ಧಿ ಇದರಿಂದ ಆಗುವುದಿಲ್ಲ. ಪ್ರಗತಿಗೆ ಸಂಪೂರ್ಣವಾಗಿ ಭಾರಿ ಹೊಡೆತ ಬೀಳಲಿದೆ ಎಂದು ಆರೋಪಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News