ಯಾದಗಿರಿ | ಬೈಕ್-ಲಾರಿ ಢಿಕ್ಕಿ : ಸ್ಥಳದಲ್ಲೇ ಸವಾರ ಮೃತ್ಯು
Update: 2025-02-02 19:05 IST
ಸುರಪುರ : ತಾಲೂಕಿನ ಶಾಂತಪುರ ಕ್ರಾಸ್ ಬಳಿಯ ಬೀದರ್ ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ಗೆ ಕ್ಯಾಂಟರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ವಾಗಣಗೇರಾ ಗ್ರಾಮದ ಬಸವರಾಜ ನೀರಡಗಿ (48 ವರ್ಷ) ಮೃತಪಟ್ಟಿದ್ದು, ಮತ್ತೋರ್ವ ವ್ಯಕ್ತಿ ದೇವಿಂದ್ರಪ್ಪ ಸಾಹುಕಾರ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.