×
Ad

ಯಾದಗಿರಿ | ಬಸ್ ಚಾಲಕರು ಸಂಸ್ಥೆ ಪಾಲಿಗೆ ಅಮೂಲ್ಯ ಆಸ್ತಿ: ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು

Update: 2025-01-25 18:45 IST

ಯಾದಗಿರಿ : ಬಸ್ ಚಾಲಕರು ಪ್ರಯಾಣಿಕರ ಮತ್ತು ಸಂಸ್ಥೆ ಪಾಲಿಗೆ ಅಮೂಲ್ಯ ಆಸ್ತಿ ಇದ್ದಂತೆ ಎಂದು ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಅಭಿಪ್ರಾಯಪಟ್ಟರು.

ಶುಕ್ರವಾರ ಸಂಜೆ ಇಲ್ಲಿನ ಬಸ್ ಡಿಪೋದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಮ್ಮಿಕೊಂಡಿದ್ದ ಚಾಲಕರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಿತ್ಯ ಲಕ್ಷಾಂತರ ಜನರು ಪ್ರಯಾಣ ಮಾಡುವ ಬಸ್ ಗಳನ್ನು ಚಲಾಯಿಸುವ ಪ್ರಯಾಣಿಕರು ನಂಬಿಗೆಯ ಅಂಬಿಗನಿದ್ದಂತೆಯೇ ಸರಿ. ಯಾವುದೇ ತೊಂದರೆಯಾಗದ ಹಾಗೇ ಸುರಕ್ಷಿತವಾಗಿ ಮುಟ್ಟಿಸುವ ಕೆಲಸ ಮಾಡುತ್ತಾರೆಂದು ಅವರ ಸೇವೆಯನ್ನು ಕೊಂಡಾಡಿದರು.

ಚಾಲಕರಿಗೆ ಆಗಾಗ ಆರೋಗ್ಯ ತಪಾಸಣೆ ಮಾಡಿಸಿಬೇಕು. ಮುಖ್ಯವಾಗಿ ನೇತ್ರ ತಪಾಸಣೆ ಮಾಡಿಸಬೇಕು, ಅವರ ಆರೋಗ್ಯದ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ನೀಡಬೇಕೆಂದರು. ರಾಜ್ಯ ಸರಕಾರ ತಮ್ಮ ಪರವಾಗಿ ಇದೆ. ಯಾವುದಕ್ಕೂ ಚಿಂತೆ ಬೇಡ ಎಂದು ಶಾಸಕರು ಹೇಳಿದರು.

ವಿಭಾಗೀಯ ನಿಯಂತ್ರಣಾಧಿಕಾರಿ ಸುನೀಲಕುಮಾರ ಚಂದ್ರರಕಿ, ಎಸ್ ಪಿ ಪ್ರಥ್ವಿಕ್ ಶಂಕರ ಮಾತನಾಡಿದರು.

ಅಧಿಕಾರಿಗಳಾದ ವೆಂಕಟೇಶ ಗೋಸಿ ಸೇರಿದಂತೆಯೇ ಅನೇಕರು ಇದ್ದರು. ಹಯ್ಯಾಳಪ್ಪ ನಿರೂಪಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News