×
Ad

ಯಾದಗಿರಿ | ಸಂವಿಧಾನ ನಮ್ಮ ದೇಶದ ಪವಿತ್ರ ಗ್ರಂಥ : ಜಯಶ್ರೀ ಚಲುವಾದಿ

Update: 2025-01-27 18:39 IST

ಯಾದಗಿರಿ/ ಗುರುಮಠಕಲ್ : ತಾಲೂಕಿನ ಕರಣಗಿ ಗ್ರಾಮದಲ್ಲಿ 76ನೇ ಗಣರಾಜ್ಯೋತ್ಸವದ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿಜೀ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.

ಶಾಲೆಯ ಮುಖ್ಯಗುರುಗಳಾದ ಜಯಶ್ರೀ ಚಲುವಾದಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜ.26ರಂದು ಆಚರಿಸಲಾಗುವ ಗಣರಾಜ್ಯೋತ್ಸವವು ನಮ್ಮ ಭಾರತ ಸಂವಿಧಾನ ಎಂದು ಕರೆಯುವ ಪವಿತ್ರ ಗ್ರಂಥದಲ್ಲಿ ಪ್ರತಿಪಾದಿಸಲಾದ ಉನ್ನತ ಮೌಲ್ಯಗಳನ್ನು ನೆನಪಿಸುವ ಹೆಮ್ಮೆಯ ರಾಷ್ಟ್ರೀಯ ದಿನವಾಗಿದೆ. ಈ ದಿನ ಸಂವಿಧಾನವನ್ನು ಜಾರಿಗೊಳಿಸಿದ ದಿನ. ಅಭಿವೃದ್ಧಿಶೀಲ ರಾಷ್ಟ್ರದ ನಿರ್ಮಾಣಕ್ಕೆ ಹೊಸ ಪಣಗಳನ್ನು ತೊಡಬೇಕೆಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು

ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ವೆಂಕಟಪ್ಪ, ಉಪಾಧ್ಯಕ್ಷ ಶಮಿನ ಬೇಗಂ, ಸದಸ್ಯರಾದ ರಾಮು, ಭೀಮರಾಯ ಕಾವಲಿ, ಲಕ್ಷ್ಮಣ್, ಮೊಹಮದ್ ಸಲಿಂ, ಊರಿನ ಗಣ್ಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಅತಿಥಿ ಶಿಕ್ಷರಾದ ಮಹೇಶ್ ಕುಮಾರ್, ವಿಜಯ್ ಕುಮಾರ್, ನಾರಾಯಣ, ಬನ್ನಪ್ಪ, ಜ್ಯೋತಿ., ವಿಜಯಲಕ್ಷ್ಮಿ, ಲಕ್ಷ್ಮೀ, ಹಾಗೂ ಅಡುಗೆ ಸಿಬ್ಬಂದಿ ಭಾಗಿಯಾಗಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News